ಬೆಂಗಳೂರು: ಡಿಜಿಪಿ ರಾಮಚಂದ್ರರಾವ್ (DGP Ramachandra Rao) ಅಮಾನತು ವಾಪಸ್ ನಿರ್ಧಾರ ಸಿಎಂ ಸಿದ್ದರಾಮಯ್ಯನವರದ್ದು (CM Siddaramaiah) ಎಂದು ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮಚಂದ್ರರಾವ್ ಅವರ ಅಮಾನತನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ವಾಪಸ್ ಪಡೆದಿದೆ. ರಾಮಚಂದ್ರರಾವ್ ಈ ತಿಂಗಳ ಕೊನೆಗೆ ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರ ಅನುಮತಿ ಪಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಅಮಾನತು ವಾಪಸ್ ಪಡೆದಿದ್ದು ಸರಿ ತಪ್ಪು ಎಂದು ನಾನು ಹೇಳಲು ಬರುವುದಿಲ್ಲ. ಅದು ಡಿಪಿಆರ್ ಮತ್ತು ಮುಖ್ಯಮಂತ್ರಿಗಳಿಗೆ ಬರುತ್ತದೆ. ಅವರು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಕೇಸ್ – ಈ ತಿಂಗಳಲ್ಲೇ ನಿವೃತ್ತಿ ಆಗ್ತಿದ್ದಾರೆ ಅಂತ ಅಮಾನತು ವಾಪಸ್: ಪರಂ

