ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಕೇಸ್ – ಈ ತಿಂಗಳಲ್ಲೇ ನಿವೃತ್ತಿ ಆಗ್ತಿದ್ದಾರೆ ಅಂತ ಅಮಾನತು ವಾಪಸ್: ಪರಂ

– ನಿವೃತ್ತಿಗೂ ಮುನ್ನ ಪೆನ್ಶನ್ ಸೆಟಲ್ ಮಾಡ್ಬೇಕು ಅಂತ ಮನವಿ ಮಾಡಿದ್ರು

ಬೆಂಗಳೂರು: ಈ ತಿಂಗಳಲ್ಲೇ ಡಿಜಿಪಿ ರಾಮಚಂದ್ರರಾವ್ (DGP Ramachandra Rao) ನಿವೃತ್ತಿ ಆಗ್ತಿದ್ದಾರೆ ಎಂದು ಅಮಾನತು ವಾಪಸ್ ಪಡೆದಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಅವರ ಅನುಮತಿ ಪಡೆದು ಡಿಪಿಆರ್ ಅಮಾನತು ವಾಪಸ್ ಪಡೆದಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಿವೃತ್ತಿ ಆಗ್ತಾರೆ ಎಂಬ ಕಾರಣಕ್ಕೆ ಅಮಾನತು ವಾಪಸ್ ಪಡೆದಿದ್ದಾರೆ. ಸಿಎಂ ಬಳಿ ರಾಮಚಂದ್ರರಾವ್ ವಿವರಣೆ ಕೊಟ್ಟಿದ್ದರು. ನಿವೃತ್ತಿ ಆಗುವ ಮುನ್ನ ಪೆನ್ಶನ್ ಸೆಟಲ್ ಮಾಡ್ಬೇಕು, ತನಿಖೆ ಮುಂದುವರೆಸಿ ಎಂದು ಮನವಿ ಮಾಡಿದ್ದರು. ಈ ವಿಚಾರ ನನಗೆ ಗೊತ್ತಿತ್ತು, ಆದರೆ ಅಮಾನತು ವಾಪಸ್ ಪಡೆದಿದ್ದು ಸರಿ, ತಪ್ಪು ಅಂತ ನಾನು ಹೇಳೋಕೆ ಆಗಲ್ಲ. ಇದು ಡಿಪಿಆರ್ ಮತ್ತು ಮುಖ್ಯಮಂತ್ರಿಗಳಿಗೆ ಅಡಿಯಲ್ಲಿ ಬರುತ್ತದೆ, ಅವರು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲಾ ಬಂಡವಾಳ ಗುಜರಾತ್‌ಗೆ ಹೋಗ್ತಿದೆ, ಐಪಿಎಲ್‍ ಸಹ ಹೈಜಾಕ್ ಮಾಡಿದ್ದಾರೆ: ಕೇಂದ್ರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ

ರಾಸಲೀಲೆ ಕೇಸಿನ ತನಿಖೆ ಮುಂದುವರೆಯುತ್ತದೆ. ಕೇಸ್ ಅಂತಿಮ ಆಗೋವರೆಗೂ ತನಿಖೆ ನಡೆಯುತ್ತದೆ. ತನಿಖೆಯಲ್ಲಿ ಬಂದ ವರದಿ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅನೇಕ ಸಮಯದಲ್ಲಿ ನಿವೃತ್ತಿ ಆದ ಮೇಲೂ ಪೆನ್ಶನ್ ತಡೆ ಹಿಡಿದಿರೋದು ನೋಡಿದ್ದೇವೆ, ತನಿಖೆಯಾಗಿ ಅಂತಿಮ ವರದಿ ಬಂದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಇದೇ ವೇಳೆ ಐಪಿಎಲ್ (IPL) ಪಂದ್ಯ ಬೆಂಗಳೂರಿನಿಂದ ಶಿಫ್ಟ್ ಆಗಿರುವ ವಿಚಾರವಾಗಿ ಮಾತನಾಡಿ, ಭದ್ರತೆ ವಿಚಾರದಲ್ಲಿ ಸ್ಥಳಾಂತರ ಆಗಿಲ್ಲ. 5 ಪಂದ್ಯ ನಡೆದಿದೆ. ಯಾವುದೇ ಸಮಸ್ಯೆ ಆಗಿಲ್ಲ. ಅರೆಂಜ್‌ಮೆಂಟ್ ಬಗ್ಗೆ ಐಪಿಎಲ್, ಆರ್‌ಸಿಬಿ, ಕೆಎಸ್‌ಸಿಎಯಿಂದ ಯಾವುದೇ ಕಂಪ್ಲೆಂಟ್ ಇಲ್ಲ. ನಮಗೆ ಅಧಿಕೃತವಾಗಿ ಬಂದ ಮಾಹಿತಿ ಪ್ರಕಾರ, 33 ಸಾವಿರ ಸೀಟು ಇವೆ. 7-8 ಸಾವಿರ ಸೀಟು ವಿಐಪಿ, ಸ್ಪಾನ್ಸರ್‌ಗಳಿಗೆ ಕೊಡಬೇಕು. ಆರ್‌ಸಿಬಿ ವಿರುದ್ಧ ಆಡುವ ತಂಡಕ್ಕೆ ಟಿಕೆಟ್ ಕೊಡಬೇಕು. ಹೀಗಾಗಿ ಉಳಿಯೋದು 22 ಸಾವಿರ ಸೀಟು. ಇದು ಕಮರ್ಷಿಯಲಿ ಅವರಿಗೆ ವರ್ಕೌಟ್ ಆಗಲ್ಲ. ಅದಕ್ಕೆ ಅಹಮದಾಬಾದ್‌ನಲ್ಲಿ 1 ಲಕ್ಷ ಸೀಟು ಇದೆ ಅಂತ ಸ್ಥಳಾಂತರ ಮಾಡಿದ್ದಾರೆ. ಪ್ರಾರಂಭದಿಂದಲೂ ಈ ಚರ್ಚೆ ಇತ್ತು. ಕೆಎಸ್‌ಸಿಎ ಅವರು ಇಲ್ಲೇ ಮಾಡಿ ಅಂತ ಹೇಳ್ತಾ ಇದ್ದರು. ಐಪಿಎಲ್ ರೂಲ್ಸ್ ಕೂಡಾ ಕಳೆದ ವರ್ಷ ಫೈನಲ್ ಗೆದ್ದ ಹೋಂ ಟೌನ್‌ನಲ್ಲಿ ಪಂದ್ಯ ಆಯೋಜನೆ ಮಾಡಬೇಕು ಅಂತ ಇತ್ತು. ಶಾಸಕರಿಗೆ ಉಚಿತ ಪಾಸ್ ಕೊಟ್ಟಿರೋದಕ್ಕೂ ಇದಕ್ಕೂ ಸಂಬಂಧವಿಲ್ಲ. ಎಷ್ಟು ಸಾವಿರ ಪಾಸ್ ಕೊಡ್ತಾ ಇದ್ದಾರಾ? 4 ಪಾಸ್ ಕೊಟ್ಟರೆ ಏನ್ ಆಗುತ್ತದೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಪ್ರವಾಹ ಎದುರಿಸಿದ್ದ ಕೃಷ್ಣೆಯ ಒಡಲು ಈಗ ಖಾಲಿ

ಶೃಂಗೇರಿ ಫಲಿತಾಂಶ ವಿಚಾರವಾಗಿ ರಾಜೇಗೌಡರು ಚುನಾವಣೆ ಆಯೋಗಕ್ಕೆ ದೂರು ನೀಡಿ, ನಂತರ ಕೋರ್ಟ್‌ಗೆ ಹೋಗ್ತಾರೆ. ರಾಜೇಗೌಡ ಖಾಸಗಿ ದೂರು ಕೊಟ್ಟಿದ್ದರು. ನಾವು ಎಫ್‌ಐಆರ್ ಮಾಡಿದ್ದೇವೆ. ಅದು ತನಿಖೆ ನಡೆಯುತ್ತದೆ. ತನಿಖೆಯಲ್ಲಿ ಮ್ಯಾನುಪುಲೇಟ್ ಮಾಡಿದ್ದು ಫ್ರೂವ್ ಆದ್ರೆ, ಅದು ಬೇರೆ ರೀತಿ ಆಗುತ್ತದೆ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಆಪ್ತನ ಕೊಲೆ ವಿಚಾರವಾಗಿ ಮಾತನಾಡಿ, ಪಶ್ಚಿಮ ಬಂಗಾಳದ ವಿಚಾರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಪ್ರತಿ ಬಾರಿ ಚುನಾವಣೆ ಆದ ಮೇಲೆ ಅನೇಕ ರಾಜ್ಯಗಳಲ್ಲಿ ಈ ರೀತಿ ಗೊಂದಲಗಳು ಆಗಿದ್ದರ ಇತಿಹಾಸವೇ ಇವೆ. ಆ ರೀತಿ ಆಗಬಾರದು. ಚುನಾವಣೆ ಆಯೋಗ ಗಮನದಲ್ಲಿಟ್ಟುಕೊಂಡು ಕಂಟ್ರೋಲ್ ಮಾಡಿಸಿಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಫೇಕ್‌ ನಂಬರ್‌ ಪ್ಲೇಟ್‌, ನಾಲ್ಕೇ ಗುಂಡು – ಸುವೇಂದು ಅಧಿಕಾರಿಯ ಪಿಎ ಹತ್ಯೆ ನಡೆದಿದ್ದು ಹೇಗೆ?

Share This Article