Bengaluru CityCinemaKarnatakaLatestMain PostSandalwoodTV Shows

ಬಿಗ್ ಬಾಸ್‌ಗೆ ಬರುವ ಮುಂಚೆ ಎರಡೇ ಬಟ್ಟೆ ಇತ್ತು, ಕಷ್ಟದ ದಿನಗಳ ಬಗ್ಗೆ ಮಾತನಾಡಿದ ನವಾಜ್

ಬಿಗ್ ಬಾಸ್ ಮನೆ(Bigg Boss House) ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಸೈಕ್ ನವಾಜ್(Nawaz) ಸಾಕಷ್ಟು ವಿಷ್ಯವಾಗಿ ದೊಡ್ಮನೆಯ ಹೈಲೆಟ್ ಆಗಿದ್ದಾರೆ. ಹಬ್ಬದ ಸಂಭ್ರಮದ ಮಧ್ಯೆ ಸ್ಪರ್ಧಿಗಳಿಗೆ ಬಟ್ಟೆಗಳನ್ನ ಬಿಗ್ ಬಾಸ್ ಕಳುಹಿಸಿದ್ದಾರೆ. ವೆರೈಟಿ ಬಟ್ಟೆಗಳನ್ನ ನೋಡಿ, ತಮ್ಮ ಕಷ್ಟದ ಜೀವನದ ಬಗ್ಗೆ ನವಾಜ್ ಭಾವುಕರಾಗಿದ್ದಾರೆ.

ಬಡ ಕುಟುಂಬದಿಂದ ಬಂದಿರುವ ನವಾಜ್, ತಮ್ಮದೇ ಭಿನ್ನ ಶೈಲಿಯಲ್ಲಿ ಸಿನಿಮಾ ವಿಮರ್ಶೆ  ಮಾಡುತ್ತ ಬಂದವರು. ಅವರಿಗೆ ಬಿಗ್ ಬಾಸ್(Bigg Boss) ಬಹುದೊಡ್ಡ ಅವಕಾಶವಾಗಿದೆ. ಮೊದಲ ವಾರ ಅವರು ಸಾಕಷ್ಟು ಸಿಟ್ಟು ಮಾಡುತ್ತಿದ್ದರು. ಆದರೆ, ಈಗ ಬದಲಾಗಿದ್ದಾರೆ. ಶಾಂತಿಯುತವಾಗಿ ವರ್ತಿಸುತ್ತಿದ್ದಾರೆ. ಅವರನ್ನು ಟ್ರಿಗರ್ ಮಾಡುವ ಯಾವುದೇ ವಿಚಾರವೂ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿಲ್ಲ. ಇನ್ನೂ ಅರುಣ್ ಸಾಗರ್ ಜತೆಯಾದ ಮೇಲೆ ನವಾಜ್ ಕೊಂಚ ಬದಲಾಗಿದ್ದಾರೆ. ಹೊಡಿ, ಬಡಿ, ಕಡಿ ಎಂದು ಹೇಳುವ ಬಾಯಲ್ಲಿ ಇದೀಗ ಕೂಲ್ ಆಗಿದ್ದಾರೆ. ಈ ಮಧ್ಯೆ ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ನವರಾತ್ರಿ ಹಬ್ಬದ ಪ್ರಯುಕ್ತ ಎಲ್ಲರಿಗೂ ಮನೆಯಿಂದ ಬಟ್ಟೆ ಕಳುಹಿಸಲಾಗಿತ್ತು. ಅದೇ ರೀತಿ ನವಾಜ್​ಗೂ ವಿವಿಧ ರೀತಿಯ ಬಟ್ಟೆಗಳು ಬಂದವು. ಅದರಲ್ಲಿ ಯಾವುದನ್ನು ಹಾಕಿಕೊಳ್ಳಬೇಕು ಎಂಬುದೇ ಅವರಿಗೆ ಗೊಂದಲ ಆಯಿತು. ಈ ಕ್ಷಣವನ್ನು ನೋಡಿ ಅವರು ಸಖತ್ ಖುಷಿಪಟ್ಟರು. ಕಷ್ಟದ ದಿನಗಳನ್ನು ಅವರು ನೆನಪಿಸಿಕೊಂಡರು.

ಹೊರಗಡೆ ಇದ್ದಾಗ ನನ್ನ ಬಳಿ ಎರಡು ಬಟ್ಟೆ ಮಾತ್ರ ಇತ್ತು. ಎರಡು ಜೀನ್ಸ್, ಎರಡು ಶರ್ಟ್‌ ಇತ್ತು. ಅದನ್ನೇ ಎಲ್ಲ ಕಡೆಗಳಲ್ಲೂ ಹಾಕಿಕೊಂಡು ಹೋಗ್ತಿದ್ದೆ. ಎಲ್ರೂ ಯಾಕೆ ಬೇರೆ ಬಟ್ಟೆ ಹಾಕಿಕೊಂಡು ಬರಲ್ಲ ಎಂದು ಕೇಳುತ್ತಿದ್ದರು. ಇದು ನನ್ನ ಇಷ್ಟದ ಡ್ರೆಸ್ ಅದಕ್ಕೆ ಹಾಕಿಕೊಂಡು ಬರ್ತೀನಿ ಅಂತಿದ್ದೆ. ಆದರೆ, ನನ್ನತ್ರ ಬಟ್ಟೆಯೇ ಇರಲಿಲ್ಲ. ಈಗ ಇಷ್ಟು ಬಟ್ಟೆ ಕಳುಹಿಸಿದ್ದಾರೆ. ಬಹುಶಃ ಇದನ್ನು ಕಳುಹಿಸಿದ್ದು ನನ್ನ ಫ್ರೆಂಡ್ಸ್ ಅನಿಸುತ್ತದೆ. ಈಗ ಯಾವ ಬಟ್ಟೆಯನ್ನು ಹಾಕಿಕೊಳ್ಳಬೇಕು ಎಂಬುದೇ ಕನ್ಫ್ಯೂಸ್ ಆಗ್ತಿದೆ ಎಂದು ನವಾಜ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ಅಮ್ಜಾದ್ ಖಾನ್ ಧರ್ಮಕ್ಕೆ ಮತಾಂತರ ಆಗಿ ಮದುವೆ ಆಗಿರುವೆ: ನಟಿ ದಿವ್ಯಾ ಶ್ರೀಧರ್

ಇನ್ನೂ ನವಾಜ್ ಈ ವಾರ ನಾಮಿನೇಷನ್ ಸಾಲಿನಲ್ಲಿದ್ದಾರೆ. ತಮ್ಮನ್ನ ಟಾಸ್ಕ್ ಪ್ರೂವ್ ಮಾಡಿಕೊಳ್ಳಲು ಯಾವುದೇ ಚಾನ್ಸ್ ಸಿಗದೇ ಬೇಸರ ಮಾಡಿಕೊಂಡಿದ್ದರು. ಇದೀಗ ಎರಡನೇ ವಾರ ನವಾಜ್ ಸೇಫ್ ಆಗುತ್ತಾರಾ. ಮನೆಯಿಂದ ಹೊರನಡೆಯುವ ಸ್ಪರ್ಧಿ ಯಾರು ಎಂಬುದನ್ನು ಕಾದುನೋಡಬೇಕಿದೆ.

Live Tv

Leave a Reply

Your email address will not be published. Required fields are marked *

Back to top button