CinemaKarnatakaLatestLeading NewsMain PostSandalwoodSouth cinema

ಅಮ್ಜಾದ್ ಖಾನ್ ಧರ್ಮಕ್ಕೆ ಮತಾಂತರ ಆಗಿ ಮದುವೆ ಆಗಿರುವೆ: ನಟಿ ದಿವ್ಯಾ ಶ್ರೀಧರ್

ಟಿ ದಿವ್ಯಾ ಶ್ರೀಧರ್ (Divya Sridhar) ಇಸ್ಲಾಂ ಧರ್ಮಕ್ಕೆ ಮತಾಂತರ (Conversion) ಆಗಿಯೇ ಅಮ್ಜಾದ್ ಖಾನ್ ಜೊತೆ ಮದುವೆ ಆಗಿರುವುದಾಗಿ ತಿಳಿಸಿದ್ದಾರೆ. ತಮಿಳು ಮಾಧ್ಯಮಗಳ ಜೊತೆ ಮಾತನಾಡಿರುವ ಅವರು  ‘ನಾವಿಬ್ಬರೂ ಒಂದೇ ಸೀರಿಯಲ್ ನಲ್ಲಿ ನಟಿಸುತ್ತಿದ್ದಾಗ ಪರಿಚಯವಾಗಿದ್ದು. ಆಮೇಲೆ ಪರಸ್ಪರ ಪ್ರೀತಿಸೋಕೆ ಶುರು ಮಾಡಿದೆವು. ಮೊದಲು ಅವರು ಮುಸ್ಲಿಂ ಅಂತ ಗೊತ್ತಿರಲಿಲ್ಲ. ಆನಂತರ ಗೊತ್ತಾಗಿದ್ದು. ಆಮೇಲೆ ತಮ್ಮ ಧರ್ಮಕ್ಕೆ ಮತಾಂತರ ಆಗುವಂತೆ ಅಮ್ಜದ್ ಖಾನ್ ಒತ್ತಾಯಿಸಿದ್ದರಂತೆ.

ನಾನು ಇಷ್ಟಪಟ್ಟ ಹುಡುಗನನ್ನು ಮದುವೆ ಆಗುವುದಕ್ಕಾಗಿ ನಾನು ಇಸ್ಲಾಂ (Islam) ಧರ್ಮಕ್ಕೆ ಮತಾಂತರ ಆದೆ. ಅದು ಅವರ ಒತ್ತಾಯವೂ ಆಗಿತ್ತು. ಆನಂತರ ಹಿಂದೂ ವಿವಾಹದ ಪ್ರಕಾರವೂ ನಾವಿಬ್ಬರೂ ಮದುವೆ ಆಗಲು ತೀರ್ಮಾನಿಸಿದ್ದೆವು. ಹಾಗಾಗಿ ಕಾಂಚಿಪುರಂನಲ್ಲಿರುವ ದೇವಾಲಯದಲ್ಲಿ ಹಿಂದೂಗಳ ಪ್ರಕಾರ ಮದುವೆ ಆದೆವು. ಅದೊಂದು ಸರಳವಾಗಿ ನಡೆದ ವಿವಾಹವಾಗಿತ್ತು ಎಂದು ಹೇಳಿಕೊಂಡಿದ್ದಾರೆ ದಿವ್ಯಾ. ಇದನ್ನೂ ಓದಿ : ಕನ್ನಡದ ನಟಿ ದಿವ್ಯಾ ಶ್ರೀಧರ್ ಲವ್ ಜಿಹಾದ್ ಆರೋಪಕ್ಕೆ ಪತಿ ಅಮ್ಜಾದ್ ಖಾನ್ ಪ್ರತಿಕ್ರಿಯೆ

ನಾವಿಬ್ಬರೂ ಮದುವೆ (Marriage) ಆದ ಫೋಟೋ ಮತ್ತು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದೆ. ಅದಕ್ಕೆ ಅವರು ವಿರೋಧ ವ್ಯಕ್ತ ಪಡಿಸಿದ್ದರು. ನನ್ನ ಕೆರಿಯರ್ ಗೆ ತೊಂದರೆ ಆಗುತ್ತದೆ. ಹಾಗಾಗಿ ಅವುಗಳನ್ನು ಡಿಲಿಟ್ ಮಾಡುವಂತೆ ಒತ್ತಡ ಹೇರಿದರು. ಯಾರಾದರೂ ಆ ಫೋಟೋ ಬಗ್ಗೆ ಕೇಳಿದರೆ, ಅವು ಜಾಹೀರಾತಿಗಾಗಿ ತಗೆದದ್ದು ಎಂದು ಹೇಳುವಂತೆ ತಿಳಿಸಿದ್ದರು ಎನ್ನುತ್ತಾ ದಿವ್ಯಾ.

ದಿವ್ಯಾ ಗರ್ಭಿಣಿ ಎನ್ನುವುದು ತಿಳಿಯುತ್ತಿದ್ದಂತೆಯೇ ಅಮ್ಜದ್ ಖಾನ್ (Amjad Khan) ದೂರ ಆಗುವುದಕ್ಕೆ ಶುರು ಮಾಡಿದರಂತೆ. ಅಲ್ಲದೇ ಮಗುವನ್ನು ಗರ್ಭಪಾತ ಮಾಡಿಸಲು ಒತ್ತಾಯಿಸಿದರಂತೆ. ಈ ಕಾರಣಕ್ಕಾಗಿ ತಮ್ಮಿಬ್ಬರ ನಡುವೆ ಜಗಳವಾಗಿದೆ ಎನ್ನುತ್ತಾರೆ ದಿವ್ಯಾ. ಈ ಜಗಳ ತಾರಕಕ್ಕೇರಿ ದೈಹಿಕ ಹಲ್ಲೆಗೆ ಒಳಗಾಗಿ ಸದ್ಯ ದಿವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ, ತಮಗಾದ ಅನ್ಯಾಯಕ್ಕೆ ದೂರು ಕೂಡ ದಾಖಲಿಸಲು ಮುಂದಾಗಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button