ವಾಷಿಂಗ್ಟನ್: 2015ರ ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ಸೂಪರ್ ಸ್ಟಾರ್ ವಿನ್ನರ್ ಸಾರಾ ಲೀ (Sara Lee) ನಿಗೂಢವಾಗಿ ಸಾವನ್ನಪ್ಪಿದ್ದಾರೆ.
2015 ಮತ್ತು 2016ರ ಸಾಲಿನಲ್ಲಿ WWE ವ್ರೆಸ್ಲಿಂಗ್ನಲ್ಲಿ ಮಿಂಚುಹರಿಸಿದ್ದ ಸಾರಾ ಲೀ, 2017 ರಿಂದ ಡಬ್ಲ್ಯೂಡಬ್ಲ್ಯೂಇ ಗುತ್ತಿಗೆಯಿಂದ ಹೊರಬಂದಿದ್ದರು. ಇದೀಗ ಆಕೆ 30ರ ಹರೆಯದಲ್ಲಿ ನಿಧನ ಹೊಂದಿರುವುದಾಗಿ ಆಕೆಯ ತಾಯಿ ಟೆರ್ರಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ
ಸಾರಾ ಲೀ ನಿಗೂಢವಾಗಿ ಸಾವನ್ನಪ್ಪಿದು, ಆಕೆಯ ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಡಬ್ಲ್ಯೂಡಬ್ಲ್ಯೂಇಗೆ ನಿವೃತ್ತಿ ಬಳಿಕ ಸಾರಾ ಲೀ ಮೂಗಿಗೆ ಸಂಬಂಧಿಸಿದಂತ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: 22 ಸಿಕ್ಸ್, 17 ಬೌಂಡರಿ – ಟಿ20ಯಲ್ಲಿ ಬರೋಬ್ಬರಿ 205 ರನ್ ಬ್ಲ್ಯಾಸ್ಟ್
WWE is saddened to learn of the passing of Sara Lee. As a former "Tough Enough" winner, Lee served as an inspiration to many in the sports-entertainment world. WWE offers its heartfelt condolences to her family, friends and fans. pic.twitter.com/jtjjnG52n7
— WWE (@WWE) October 7, 2022
ಸಾರಾ ಲೀ, ವ್ರೆಸ್ಲಿಂಗ್ ತಾರೆ ವೆಸ್ಟಿನ್ ಬ್ಲೇಕ್ (Westin Blake) (ಕೋರಿ ವೆಸ್ಟನ್) ಅವರನ್ನು ವಿವಾಹವಾಗಿದ್ದು, ದಂಪತಿಗೆ ಮೂರು ಮಕ್ಕಳಿದ್ದಾರೆ. ಸಾರಾ ಲೀ ಮರಣದ ಕುರಿತಾಗಿ ಡಬ್ಲ್ಯೂಡಬ್ಲ್ಯೂಇ ಸಂಯೋಜಕರು ಸಹಿತ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]