ಹೈದರಾಬಾದ್: ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವಕನನ್ನ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಯೊಬ್ಬರು ತನ್ನ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ ಘಟನೆ ಹೈದರಾಬಾದ್ನಲ್ಲಿ ನಡೆದಿದ್ದು, ಇದರ ವಿಡಿಯ ಈಗ ವೈರಲ್ ಆಗಿದೆ.
Advertisement
Advertisement
ಶನಿವಾರದಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಹಿಳಾ ಸಿಬ್ಬಂದಿಯ ಕಾಲಿಗೆ ಬಿದ್ದ ಯುವಕ ಮದ್ಯಪಾನ ಮಾಡಿದ್ದ ಎಂದು ಏರ್ ಲೈನ್ಸ್ ಆರೋಪಿಸಿದೆ. ಮಹಿಳೆ ಆತನಿಗೆ “ನನ್ನ ಕಾಲಿಗೆ ಬೀಳು” ಎಂದು ತೆಲುಗಿನಲ್ಲಿ ಹೇಳೋದನ್ನ ವಿಡಿಯೋದಲ್ಲಿ ಕಾಣಬಹುದು.
Advertisement
Advertisement
ನಡೆದಿದ್ದೇನು: ಮಹಿಳೆ ತನ್ನ ಬೆಳಗ್ಗಿನ ಶಿಫ್ಟ್ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಪಾರ್ಕಿಂಕ್ನಿಂದ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿದ್ರು. ಈ ವೇಳೆ ಯುವಕ ಮತ್ತು ಆತನ ಗೆಳೆಯ ಆಕೆಯನ್ನು ಹಿಂಬಾಲಿಸಿದ್ದಾರೆ. ನಂತರ ಮಹಿಳೆ ಟ್ರಾಫಿಕ್ ಪೊಲೀಸ್ಗೆ ಈ ಬಗ್ಗೆ ದೂರು ನೀಡಿದ್ದಾರೆ. ಆಗ ಟ್ರಾಫಿಕ್ ಪೊಲೀಸ್ ಇಬ್ಬರನ್ನೂ ವಿಮಾನ ನಿಲ್ದಾಣದ ಪೊಲೀಸ್ ಪೋಸ್ಟ್ ಗೆ ಎಳೆದೊಯ್ದಿದ್ದಾರೆ. ಈ ವೇಳೆ ಒಬ್ಬಾತ, ನಿಮ್ಮ ಕಾಲಿಗೆ ಬೇಕದ್ರೂ ಬೀಳ್ತೀನಿ, ಬಿಟ್ಟುಬಿಡಿ ಎಂದು ಮಹಿಳೆಯ ಬಳಿ ಮನವಿ ಮಾಡಿಕೊಂಡಿದ್ದಾನೆ.
ಇಬ್ಬರೂ ವಿದ್ಯಾರ್ಥಿಗಳು ಎಂದು ಗೊತ್ತಾದ ಬಳಿಕ ಮಹಿಳೆ ಯಾವುದೇ ದೂರು ದಾಖಲಿಸಲಿಲ್ಲ. ಆದರೆ ಸಾರ್ವನಿಕ ಸ್ಥಳದಲ್ಲಿ ಈ ರೀತಿ ಮಾಡಿದ್ದರಿಂದ ಅವರನ್ನ ಕೆಲವು ಗಂಟೆಗಳ ಕಾಲ ವಶದಲ್ಲಿರಿಸಿಕೊಂಡು ನಂತರ ಬಿಟ್ಟು ಕಳಿಸಲಾಯ್ತು ಎಂದು ಪೊಲೀಸ್ ಅಧಿಕಾರಿ ರಮೇಶ್ ನಾಯ್ಕ್ ಹೇಳಿದ್ದಾರೆ.
ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದರಿಂದ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಯ್ತು ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
https://www.youtube.com/watch?v=-d9rlBdRhpA