ಮೈಸೂರಿನ ಗೀತಾ ಗೋಪಿನಾಥ್‌ ಐಎಂಎಫ್‌ನ ಉನ್ನತ ಹುದ್ದೆಗೆ ಬಡ್ತಿ

Public TV
1 Min Read
gita gopinath 1 0

ವಾಷಿಂಗ್‌ಟನ್: ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್‌ ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.

gita gopinath

ಐಎಂಎಫ್‌ನ ಹಾಲಿ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಜೆಫ್ರಿ ಒಕಾಮೊಟೊ ಅವರ ಅಧಿಕಾರವಧಿ 2022ರ ಮೊದಲ ತಿಂಗಳು ಮುಕ್ತಾಯವಾಗಲಿದೆ. ಆ ಸ್ಥಾನಕ್ಕೆ ಗೀತಾ ಗೋಪಿನಾಥ್‌ ಬಡ್ತಿ ಪಡೆದಿದ್ದಾರೆ. ಐಎಂಎಫ್‌ನಲ್ಲಿ ಉನ್ನತ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರು ಎಂಬ ಹೆಗ್ಗಳಿಕೆಗೆ ಈ ಇಬ್ಬರೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಸ್ವಚ್ಛತೆ ಎನ್ನುವ ಪತ್ನಿಗೆ ಡೈವೋರ್ಸ್ ನೀಡಲು ಮುಂದಾದ ಪತಿ

gita gopinath

ಐಎಂಎಫ್‌ನ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಅವರು, ಸೂಕ್ತ ಸಮಯಕ್ಕೆ ಸೂಕ್ತ ವ್ಯಕ್ತಿಯೇ ಪ್ರಮುಖ ಸ್ಥಾನಕ್ಕೆ ಬರುತ್ತಿದ್ದಾರೆ ಎಂದು ಗೀತಾ ಗೋಪಿನಾಥ್‌ ಅವರನ್ನು ಹೊಗಳಿದ್ದಾರೆ.

ನಮ್ಮ ಸದಸ್ಯ ರಾಷ್ಟ್ರಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳಿಗೆ ಸಾಂಕ್ರಾಮಿಕ ರೋಗ ಪ್ರಮುಖ ಕಾರಣವಾಗಿದೆ. ಗೀತಾ ಅವರು ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ನಮ್ಮ ಕ್ಷೇತ್ರಕ್ಕೆ ಅಗತ್ಯವಿರುವ ಪರಿಣತಿಯನ್ನು ಅವರನ್ನು ಹೊಂದಿದ್ದಾರೆ ಎಂದು ಜಾರ್ಜೀವಾ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

IMF 1

ಜಾಗತಿಕ ಮಟ್ಟದಲ್ಲಿ ಅರ್ಥಶಾಸ್ತ್ರಜ್ಞೆಯಾಗಿ ಹೆಸರು ಮಾಡಿರುವ ಗೀತಾ ಗೋಪಿನಾಥ್‌ ಅವರು ಭಾರತದ ಕರ್ನಾಟಕ ರಾಜ್ಯದ ಮೈಸೂರು ಮೂಲದವರು.

Share This Article
Leave a Comment

Leave a Reply

Your email address will not be published. Required fields are marked *