ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿ ಸ್ಟೇಟಸ್ ಹಾಗೂ ವಿಡಿಯೋ ಅಪ್ಲೋಡ್ ಮಾಡಿ ಭ್ರಷ್ಟಾಚಾರ ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಖಂಡಿಸುತ್ತಿದ್ದ ನೆಲಮಂಗಲದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ.
ಇದಕ್ಕೆ ಕಾರಣ ನೆಲಮಂಗಲದ ಜೆಡಿಎಸ್ ಶಾಸಕ ಶ್ರೀನಿವಾಸಮೂರ್ತಿ. ಜನಪ್ರತಿನಿಧಿಗಳ ಕಾರ್ಯವೈಖರಿಯ ಕುರಿತು ಸ್ಟೇಟಸ್ ಹಾಕುತ್ತಿದ್ದ ಕಾರಣಕ್ಕೆ ಶಿಕ್ಷಕಿ ಶಿವಕುಮಾರಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿದೆ.
Advertisement
ಶಾಸಕ ಶ್ರೀನಿವಾಸಮೂರ್ತಿ, ಶಿವಕುಮಾರಿ ಅಣ್ಣ ರಾಜು ಜೊತೆ ಮಾತನಾಡಿದ್ದು, ಈಕೆ ಚುನಾವಣೆಗೆ ಸ್ಪರ್ಧಿಸಿದರೆ ಕೆಲಸ ಕಳೆದುಕೊಳ್ತಾಳೆ. ಜೊತೆಗೆ, ನೆಲಮಂಗಲದಲ್ಲಿ ಕೊಲೆಯಾಗಿ ಹೋಗ್ತಾಳೆ. ಸುಮ್ನೆ ಇದನ್ನೆಲ್ಲಾ ಬಿಟ್ಟು ಸೈಲೆಂಟಾಗಿ ಇರೋಕೆ ಹೇಳು ಅಂತಾ ಬೆದರಿಸಿದ್ದಾರೆ ಅಂತ ಹೇಳಿದ್ದಾರೆ.
Advertisement
ಶಾಸಕರ ದರ್ಪ ಸಂಬಂಧ ಎಲ್ಲಾ ದಾಖಲೆ ಇವೆ. ರಿಲೀಸ್ ಮಾಡ್ತಿನಿ ಎಂದಿದ್ದಾರೆ. ಅಲ್ಲದೇ ಈ ಬಾರಿ ನೆಲಮಂಗಲ ಮೀಸಲು ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಅಂತ ಶಿಕ್ಷಕಿ ಸವಾಲ್ ಹಾಕಿದ್ದಾರೆ.