ವಿಜಯಪುರ: ಸಚಿವ ನಾಗೇಂದ್ರ (Minister Nagendra) ಅವರು ಕಾನೂನು ನಿಯಮ ಉಲ್ಲಂಘನೆ ಮಾಡಿದ್ದರೆ ಅದು ತಪ್ಪು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದರು.
ವಿಜಯಪುರದಲ್ಲಿ (Vijayapura) ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಜಾಮೀನಿನ ಮೇಲಿರುವ ನಾಗೇಂದ್ರ ಅವರು ದೆಹಲಿಗೆ ತೆರಳಿದ್ದ ವಿಚಾರದ ಬಗ್ಗೆ ಮಾತನಾಡಿದರು. ಅವರು ಪರವಾನಿಗೆ ಪಡೆದು ಹೋಗಬೇಕಾಗುತ್ತೆ. ಇದರಿಂದ ಅವರ ಜಾಮೀನು ರದ್ದಾಗುತ್ತೆ ಅನ್ನೋದು ಗೊತ್ತಿಲ್ಲ. ಅದನ್ನ ಅವರ ವಕೀಲರು ನೋಡುತ್ತಾರೆ ಎಂದರು. ಇದನ್ನೂ ಓದಿ: ದೇವೇಗೌಡರ ಕುಟುಂಬದ ಕೊನೇ ಉಸಿರು ಇರೋವರೆಗೂ ರೈತರ ಪರ ಹೋರಾಟ: ನಿಖಿಲ್ ಗುಡುಗು
ಸಂಪುಟ ವಿಸ್ತರಣೆ ವೇಳೆ ಸಿದ್ದರಾಮಯ್ಯ ಆಪ್ತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಸಿದ್ದರಾಮಯ್ಯನವರು ಅಸಮಾಧಾನಗೊಂಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಹೇಳಿದ್ದು? ತಂದೆಯವರೇ ಬಂದು ಬಹಿರಂಗವಾಗಿ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ. ನಾನೇ ತಂದೆಯವರ ಜೊತೆ ಇದ್ದೀನಲ್ಲ. ಅವರಿಗೆ ಏನು ಅಸಮಾಧಾನ ಇಲ್ಲ. ಮತ್ತೆ ಮೂಲೆಗುಂಪು ಕೂಡ ಮಾಡಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದರೆ ತಂದೆಯವರನ್ನ ಕರೆದು, ಅವರ ಅಭಿಪ್ರಾಯಗಳನ್ನು ತೆಗೆದುಕೊಂಡಿದ್ದಾರೆ. ಅವರದ್ದು ಅಭ್ಯರ್ಥಿಗಳ ಪಟ್ಟಿ ಕೊಟ್ಟಿದ್ದರು, ಅದನ್ನೂ ಇಟ್ಟುಕೊಂಡು ಅದರಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಮಾಡಿದ್ದಾರೆ.
ಇದ್ದಿದ್ದೇ 15 ಸ್ಥಾನಗಳು. ಅದರೊಳಗೆ ತಂದೆಯವರು ಹೆಚ್ಚಿನ ಹೆಸರೇ ಕೊಟ್ಟಿದ್ದರು. ಅದರೊಳಗೆ ಅವರು ಕೆಲವರನ್ನ ಪಿಕ್ ಮಾಡಿ ಕೊಂಡಿದ್ದಾರೆ. ಹಾಗಾಗಿ ತಂದೆಯವರಿಗೆ ಏನು ಅಸಮಾಧಾನ ಇಲ್ಲ ಎಂದರು. ಇದನ್ನೂ ಓದಿ: ರೆಂಜಾಳ ಭೂಕುಸಿತದ ಪ್ರದೇಶಕ್ಕೆ ಸಚಿವ ಯು.ಟಿ.ಖಾದರ್ ಭೇಟಿ



