ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ (U.T.Khader) ಅವರು ಭೂಕುಸಿತ ಅಪಾಯ ಎದುರಿಸುತ್ತಿರುವ ಕಾರ್ಕಳ ತಾಲೂಕು ರೆಂಜಾಳ (Renjana) ಗ್ರಾಮದ ಪೆರಾಲ್ದಬೆಟ್ಟು ಹೇಷ್ಮೆ ಪ್ರದೇಶಕ್ಕೆ ಭೇಟಿ ನೀಡಿ ಅಪಾಯದ ಗಂಭೀರತೆಯನ್ನು ಅರಿತುಕೊಂಡರು.
ಈ ಸಂದರ್ಭದಲ್ಲಿ ಭೂಕುಸಿತದಿಂದ ಅಪಾಯ 3 ಎದುರಿಸುತ್ತಿರುವ ಅಲ್ಲೇ ಸಮೀಪದಲ್ಲಿ ವಾಸವಾಗಿರುವ ಹರಿಪ್ರಸಾದ್ ಹಾಗೂ ಸುಮಿತ್ರಾ ಕುಟುಂಬಗಳನ್ನು ಕಂಡು ಮಾತನಾಡಿಸಿದ ಸಚಿವರು, ಅವರಿಗೆ ಎಲ್ಲಾ ರೀತಿಯ ಸಹಾಯದ ಭರವಸೆಯನ್ನು ನೀಡಿದರು. ಇದನ್ನೂ ಓದಿ: ಚಾಮರಾಜನಗರ | ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಸಾವು
ಗ್ರಾಮ ಪಂಚಾಯಿತಿಯಿಂದ ಮನೆ ತೆರವು ಮಾಡಿ ರೆಂಜಾಳ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚನೆ ಬಂದಿರುವುದನ್ನು ತಿಳಿಸಿದ ಹರಿಪ್ರಸಾದ್, ಶಾಲೆಯಲ್ಲಿ ವಾಸ ಮಾಡುವುದಕ್ಕಿರುವ ಸಮಸ್ಯೆಯನ್ನು ಹೇಳಿಕೊಂಡರು. ತಮಗೆ ಗ್ರಾಮ ಪಂಚಾಯಿತಿ ವತಿಯಂದ ಸೂಕ್ತ ವ್ಯವಸ್ಥೆ ಮಾಡುವಂತೆ ಅವರು ಸಚಿವರಿಗೆ ಮನವಿ ಮಾಡಿದರು. ಮಳೆಗಾಲ ಮುಗಿಯುವವರೆಗೆ ಅವರಿಗೆ ಪ್ರತ್ಯೇಕ ವಾಸ್ತವ್ಯದ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಒಂದು ಕಡೆ ಭೂಮಿ ಮೇಲಕ್ಕೆದ್ದಿರುವ ಪ್ರದೇಶವನ್ನು ವೀಕ್ಷಿಸಿದ ಸಚಿವರು, ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಭೂವಿಜ್ಞಾನಿಗಳು ಹಾಗೂ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅವರ ವರದಿಯನ್ನಾಧರಿಸಿ ಮುಂದಿನ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಾಂಗ್ಲಾ ವಲಸಿಗರಿಗೆ ಶೆಡ್ ನಿರ್ಮಿಸಲು ಜಾಗ ಬಾಡಿಗೆ; ಮಾಲೀಕರ ವಿರುದ್ಧ ಕೇಸ್



