– ಅವನಿಗೆ ತಾಯಿ ಅಂದ್ರೆ ಪ್ರಾಣ
ಬೆಂಗಳೂರು: ನಾನು ಮನೆಯಲ್ಲಿ ಇದ್ದಿದ್ರೆ ನನ್ನನ್ನೂ ಕೊಲೆ ಮಾಡ್ತಿದ್ದ ಅನಿಸುತ್ತೆ ಎಂದು ಕಾಮಾಕ್ಷಿಪಾಳ್ಯದಲ್ಲಿ (Kamakshipalya) ತ್ರಿವಳಿ ಕೊಲೆ ಮಾಡಿದ್ದ ಹಂತಕನ ತಂದೆ ಚಿಕ್ಕಣ್ಣ ಅವರು ಹೇಳಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕೊಲೆ ಮಾಡೋಕೆ ಕಾರಣ ಏನೂ ಇರಲಿಲ್ಲ. ಏನೋ ಸಣ್ಣ ಜಗಳ ಆಗಿತ್ತು. ಅದನ್ನೇ ದೊಡ್ಡದು ಮಾಡಿಕೊಂಡಿದ್ದಾರೆ. ಊಟ, ತಿಂಡಿ ವಿಚಾರಕ್ಕೆ ಆಗಾಗ ಸಣ್ಣದಾಗಿ ಗಲಾಟೆ ಆಗುತ್ತಿತ್ತು ಅಷ್ಟೇ. ಅವನಿಗೆ ತಾಯಿ ಅಂದರೆ ಪ್ರಾಣ. ಸ್ವಲ್ಪ ಮುಂಗೋಪ. ಆದರೆ ಈ ರೀತಿ ನಿರ್ಧಾರ ತೆಗೆದುಕೊಳ್ತಾನೆ ಅಂದಕೊಂಡಿರಲಿಲ್ಲ. ಗೊತ್ತಿದ್ರೆ ಅಂಗಡಿಗೆ ಹೋಗ್ತಾನೆ ಇರಲಿಲ್ಲ. ಒಂದು ವೇಳೆ ನಾನು ಮನೆಯಲ್ಲಿಯೇ ಇದ್ದಿದ್ದರೆ ನನನ್ನು ಕೊಲೆ ಮಾಡ್ತಿದ್ದಾ ಅನಿಸುತ್ತೆ ಎಂದಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ ಪೋಕ್ಸೋ ಆರೋಪಿಯಿಂದ ಮಾರಣಹೋಮ – ಪತ್ನಿ, ಮಕ್ಕಳು, ಸಂತ್ರಸ್ತೆ ಸೇರಿ 6 ಜನರ ಬರ್ಬರ ಹತ್ಯೆ
ನಿನ್ನೆ ರಾತ್ರಿ ಊಟ ಮಾಡಿ, ಎಲ್ಲರೂ ಮಲಗಿದ್ವಿ. ಎಂದಿಂತೆ ಇಂದು ಬೆಳಿಗ್ಗೆ ನಾನು ಆರು ಗಂಟೆಗೆ ಕೆಲಸಕ್ಕೆ ಹೋಗಿದ್ದೆ. ನಾನು ಮನೆಯಿಂದ ಹೋದಾಗ ಎಲ್ಲರೂ ಕೂಡ ಮಲಗಿದ್ರು. 10 ಗಂಟೆಗೆ ನನ್ನ ಸ್ನೇಹಿತ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ. ಬಂದು ನೋಡಿದ ಬಳಿಕ ಮೂವರನ್ನ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಯ್ತು. ಮಗ ಪ್ರಶಾಂತ್ ಮಾನಸಿಕವಾಗಿ ಚೆನ್ನಾಗಿಯೇ ಇದ್ದ. ಮಾನಸಿಕವಾಗಿ ಕುಗ್ಗಿದ್ರೆ ಯಾಕೆ ಡ್ರೈವರ್ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?
ಮೂಲತಃ ಕುಣಿಗಲ್ ಬಳಿಯ ಮಾಗಡಿ ಪಾಳ್ಯ ಮೂಲದ ಕುಟುಂಬದವರಾಗಿದ್ದು, ತಂದೆ ಇಸ್ತ್ರೀ ಅಂಗಡಿ ಇಟ್ಟುಕೊಂಡಿದ್ದರು. ಮೃತ ಮಂಗಳಮ್ಮ ಗಾರ್ಮೆಂಟ್ ಕೆಲಸ ಹಾಗೂ ನಂಜಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇಂದು (ಜು.11) ಬೆಳಿಗ್ಗೆ 8:30ರ ಸುಮಾರಿಗೆ ಆರೋಪಿ ಪ್ರಶಾಂತ್ ತಾಯಿ, ಅಜ್ಜಿ ಹಾಗೂ ಮಾವನನ್ನು ಬರ್ಬರವಾಗಿ ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿದ್ದಾನೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ತ್ರಿವಳಿ ಕೊಲೆ – ತಾಯಿ, ಅಜ್ಜಿ, ಮಾವನನ್ನು ಕೊಂದು ಪರಾರಿಯಾಗಬೇಕಿದ್ದವ ಸೂಸೈಡ್
