ಬೆಂಗಳೂರು: ಕಳೆದೆರಡು ದಿನದಿಂದ ನಿದ್ದೆಗೆಡಿಸಿದ್ದ ಚಿರತೆಗೆ ಬ್ಯಾಡರಹಳ್ಳಿಯ (Byadarahalli) ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ.
ಹೌದು, ಸಾಮಾನ್ಯವಾಗಿ ಜನ ಚಿರತೆ ಬಂದಾಗ ಒಮ್ಮೆ ಸೆರೆ ಸಿಕ್ಕರೆ ಸಾಕು ಎನ್ನುತ್ತಾರೆ. ಆದರೆ ಬ್ಯಾಡರಹಳ್ಳಿ ಜನ ಚಿರತೆ ಸೆರೆಯಾಗದ ಆತಂಕದಲ್ಲಿದ್ದರೂ ಕೂಡ ಅದೇ ಚಿರತೆಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಚಿರತೆ ಆತಂಕ: ರಾತ್ರಿ, ಮುಂಜಾನೆ ಜನವಸತಿ ಪ್ರದೇಶದಲ್ಲೇ ಸಂಚಾರ
ಚಿರತೆ ಕಾಣಿಸಿಕೊಂಡಿದ್ದ ಪಾರ್ಕ್ ಹಲವು ವರ್ಷಗಳಿಂದ ಪಾಳು ಬಿದ್ದಿತ್ತು. ಇದನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ನೂರಾರು ಬಾರಿ ಪಾಲಿಕೆ, ಬಿಡಿಎ (BDA) ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿರಲಿಲ್ಲ. ಆದರೆ ಇದೀಗ ಚಿರತೆ ಸೆರೆ ಕಾರ್ಯಾಚರಣೆ ಹಿನ್ನೆಲೆ ಅಧಿಕಾರಿಗಳು ಪಾಳುಬಿದ್ದ ಪಾರ್ಕ್ ಹಾಗೂ ಗಿಡಗಂಟಿಗಳನ್ನು ಕ್ಲೀನ್ ಮಾಡುತ್ತಿದ್ದಾರೆ. ಹೀಗಾಗಿ ಚಿರತೆ ಬಂದಿದ್ದರಿಂದಾದೂ ಪಾರ್ಕ್ ಕ್ಲೀನ್ ಆಯಿತು ಎನ್ನುವ ಖುಷಿಯನ್ನು ಸ್ಥಳೀಯರು ಹಂಚಿಕೊಂಡಿದ್ದಾರೆ.
ಕಳೆದ 2 ದಿನಗಳಿಂದ ಭಾರತ್ ನಗರದಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದು, ಅರಣ್ಯ ಇಲಾಖೆ ಹೆಚ್ಚುವರಿಯಾಗಿ ಬೋನ್ ಇರಿಸಿದೆ. ಸದ್ಯ ಬ್ಯಾಡರಹಳ್ಳಿ, ಭಾರತ ನಗರದಲ್ಲಿ ಪೊಲೀಸರು ಹೆಚ್ಚುವರಿಯಾಗಿ ಗಸ್ತು ತಿರುಗುತ್ತಿದ್ದು, ಜನರಿಗೆ ಓಡಾಡದಂತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷ – ವಾಕಿಂಗ್‌ಗೆ ಬಂದಿದ್ದವರಿಗೆ ದರ್ಶನ, ಪಾರ್ಕ್‌ನಿಂದ ಎದ್ನೋ ಬಿದ್ನೋ ಅಂತ ಓಡಿದ ಜನ
