ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ (US- Iran War) ನಡುವಿನ ಜಟಾಪಟಿ ಈಗ ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ತನ್ನ ಹತ್ಯೆಗೆ ಇರಾನ್ ಸಂಚು ರೂಪಿಸಿದ ವಿಚಾರ ತಿಳಿದು ಸಿಟ್ಟಾಗಿರುವ ಟ್ರಂಪ್ (Donald Trump) ಇರಾನ್ ವಿರುದ್ಧ ಯುದ್ಧದ ತೀವ್ರ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಜಾಲತಾಣ ಟ್ರುತ್ ಸೋಶಿಯಲ್ (Truth Social) ನಲ್ಲಿ ಗುಡುಗಿರುವ ಡೊನಾಲ್ಡ್ ಟ್ರಂಪ್, ಇರಾನ್ ದೇಶದ ಮೇಲೆ ದಾಳಿ ಮಾಡಲು ಅಮೆರಿಕದ 1,000 ಕ್ಷಿಪಣಿಗಳು (Missiles) ಸಕಲ ಸಿದ್ಧತೆಗಳೊಂದಿಗೆ ಗುರಿ ಇಟ್ಟು ನಿಂತಿವೆ ಎಂದು ಘೋಷಿಸಿದ್ದಾರೆ.
ಇರಾನ್‌ನಿಂದ ತಮಗೆ ಎದುರಾಗಿರುವ ಜೀವ ಬೆದರಿಕೆಯ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಅಮೆರಿಕದ ಮಿಲಿಟರಿ ಪಡೆಗಳಿಗೆ ಈಗಾಗಲೇ ಸ್ಪಷ್ಟ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮೇಲೆ ದಾಳಿ ಮಾಡಲು 1,000 ಕ್ಷಿಪಣಿಗಳು ಲಾಕ್ ಅಂಡ್ ಲೋಡ್ (Locked and Loaded) ಆಗಿ ಸಿದ್ಧವಾಗಿವೆ. ಅಮೆರಿಕದ ಹಾಲಿ ಅಧ್ಯಕ್ಷರನ್ನು, ಅಂದರೆ ನನ್ನನ್ನು ಹತ್ಯೆ ಮಾಡಲು ಅಥವಾ ಹತ್ಯೆಗೆ ಇರಾನ್ ಸರ್ಕಾರ ಯತ್ನಿಸಿದರೆ, ಈ ಸಾವಿರ ಕ್ಷಿಪಣಿಗಳ ಬೆನ್ನಲ್ಲೇ ಇನ್ನೂ ಸಾವಿರಾರು ಕ್ಷಿಪಣಿಗಳು ಇರಾನ್ ಮೇಲೆ ಬೀಳಲಿವೆ ಎಂದು ಗುಡುಗಿದ್ದಾರೆ.

ಅಮೆರಿಕ ಮಿಲಿಟರಿ ಪಡೆಗಳು ಇರಾನ್‌ನ ಇಂಚಿಂಚು ಪ್ರದೇಶವನ್ನು ಸಂಪೂರ್ಣವಾಗಿ ಧ್ವಂಸ ಮಾಡಲು ಸನ್ನದ್ಧವಾಗಿವೆ. ಈ ಮಿಲಿಟರಿ ಕಾರ್ಯಾಚರಣೆಯ ಆದೇಶವು ಸದ್ಯಕ್ಕೆ ಒಂದು ವರ್ಷದ ಅವಧಿಗೆ ಜಾರಿಯಲ್ಲಿದ್ದು, ಅಗತ್ಯ ಬಿದ್ದರೆ ಇದನ್ನು ವಿಸ್ತರಿಸಲಾಗುವುದು ಎಂದು ಎಂದು ಟ್ರಂಪ್ ಇರಾನ್‌ಗೆ ನೇರ ಸಂದೇಶ ರವಾನಿಸಿದ್ದಾರೆ.
ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲೂ, “ನನಗೆ ಏನಾದರೂ ಸಂಭವಿಸಿದರೆ ಇರಾನ್ ಹಿಂದೆಂದೂ ಕಾಣದ ಮಟ್ಟಿಗೆ ಬಲವಾದ ಬಾಂಬ್ ದಾಳಿ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್ ನೀಡಿದ ಸ್ಫೋಟಕ ಮಾಹಿತಿ ಕೇಳಿ ಸಿಐಎ ಶಾಕ್ – ಇರಾನ್ ಮೇಲೆ ದಾಳಿಗೆ ಟ್ರಂಪ್ ಆದೇಶ
ಹಾರ್ಮುಜ್ ಜಲಸಂಧಿ(Strait of Hormuz)ಸಂಪೂರ್ಣವಾಗಿ ಮುಕ್ತವಾಗಿದೆ ಮತ್ತು ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ತಕ್ಷಣವೇ ನಿಲ್ಲಿಸಲಾಗುವುದು ಎಂದು ಇರಾನ್ ಸರ್ಕಾರವು ಶನಿವಾರದೊಳಗೆ ಬಹಿರಂಗವಾಗಿ ಘೋಷಿಸಬೇಕು ಎಂದು ಅಮೆರಿಕ ಬಿಗಿಪಟ್ಟು ಹಿಡಿದಿದೆ.
