LatestMain PostNational

ಪತಿ ಜೊತೆಗಿನ ಫೋಟೋ ಹಂಚಿಕೊಂಡ ಐಎಎಸ್ ಟಾಪರ್ ಟೀನಾ ದಾಬಿ

ನವದೆಹಲಿ: ವಿವಾಹದ ಬಳಿಕ ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ತಮ್ಮ ಟ್ಟಿಟ್ಟರ್ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದು, ಪತಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನವದಂಪತಿ ವೈಟ್ ಆ್ಯಂಡ್ ವೈಟ್ ಉಡುಪು ಧರಿದಿ ಸೋಫಾ ಮೇಲೆ ಕುಳಿತು ಫೋಟೋಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದಾಗಿದೆ.

2016ರ ಬ್ಯಾಚ್‍ನ ಯುಪಿಎಸ್‍ಸಿ ಟಾಪರ್ ಮತ್ತು ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ಶುಕ್ರವಾರ ರಾಜಸ್ಥಾನದ ಜೈಪುರದಲ್ಲಿ ಸರಳವಾಗಿ ಪ್ರದೀಪ್ ಗವಾಂಡೆ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಮರಾಠಿ ಸಂಪ್ರದಾಯಂತೆ ದಂಪತಿಗಳು ಹಾರವನ್ನು ವಿನಿಮಯ ಮಾಡಿಕೊಂಡರು. ಮದುವೆ ವೇಳೆ ಟೀನಾ ಬಿಳಿ ಮತ್ತು ಗೋಲ್ಡನ್ ಸೀರೆಯನ್ನು ಧರಿಸಿದ್ದು, ಕೂದಲಿನಲ್ಲಿ ಗಜ್ರಾವನ್ನು ಧರಿಸಿದ್ದು, ಪ್ರದೀಪ್ ಕೂಡ ಬಿಳಿ ಕುರ್ತಾ-ಪೈಜಾಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: 2ನೇ ಮದುವೆಗೆ ತಯಾರಾದ ಐಎಎಸ್ ಟಾಪರ್ ಟೀನಾ

2015 ರಲ್ಲಿ, ಟೀನಾ ದಾಬಿ ದಲಿತ ಸಮುದಾಯದಿಂದ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ವ್ಯಕ್ತಿಯಾದರು. ಟೀನಾ ದಾಬಿ ಮತ್ತು ಅಥರ್ ಅಮೀರ್ ಉಲ್‍ಶಫಿ ಖಾನ್ ಇಬ್ಬರೂ ತರಬೇತಿ ಸಮಯದಲ್ಲಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. 2018 ರಲ್ಲಿ ಅವರಿಬ್ಬರ ವಿವಾಹವೂ ಬಹಳಷ್ಟು ಸುದ್ದಿ ಮಾಡಿತ್ತು. ಟೀನಾ 2020ರ ನವೆಂಬರ್‍ನಲ್ಲಿ ಮೊದಲ ಪತಿ ಅಮೀರ್ ಉಲ್‍ಶಫಿ ಖಾನ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಮದುವೆಯಾಗಿ ಎರಡೇ ವರ್ಷಕ್ಕೆ ಈ ದಂಪತಿ ಬೇರೆಯಾಗಿದ್ದರು. ಇದನ್ನೂ ಓದಿ: ಐಎಎಸ್‌ ಟಾಪರ್‌ ಟೀನಾ ಡಾಬಿ, ಅಥರ್‌ ಖಾನ್‌ ಜೋಡಿಯಿಂದ ವಿಚ್ಛೇದನಕ್ಕೆ ಅರ್ಜಿ

Leave a Reply

Your email address will not be published.

Back to top button