– ವಿಚಾರಣೆ ವೇಳೆ ಕೊಲೆ ರಹಸ್ಯ ಬಾಯ್ಬಿಟ್ಟ ಪತ್ನಿ
– ಪ್ರಿಯಕರನ ಜೊತೆ ಸೇರಿ ಕೊಲೆಗೆ ಸ್ಕೆಚ್
ಬಾಗಲಕೋಟೆ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದು, ಆತ್ಮಹತ್ಯೆ ಎಂದು ಬಿಂಬಿಸಿದ್ದ ಪ್ರಕರಣದ ರಹಸ್ಯವನ್ನು ಜಿಲ್ಲೆಯ ಹುನಗುಂದ ಪೊಲೀಸರು ಬಯಲು ಮಾಡಿದ್ದಾರೆ.
ಹುನಗುಂದ ತಾಲೂಕಿನ ಕಲ್ಲಗೋನಾಳ ಗ್ರಾಮ ಪಂಚಾಯ್ತಿ ಸದಸ್ಯೆ ಲಕ್ಷ್ಮೀಬಾಯಿ ತನ್ನ ಪತಿ ಭೀಮನಗೌಡನನ್ನು ಕೊಲೆ ಮಾಡಿದ್ದಾಳೆ. ಪ್ರಿಯಕರ ಕೆಎಸ್ಆರ್‌ಟಿಸಿ ಚಾಲಕನಾಗಿರುವ ಶಿವನಗೌಡನ ಜೊತೆ ಸೇರಿ ನವೆಂಬರ್ 26ರಂದು ಪತಿಯನ್ನು ಲಕ್ಷ್ಮೀಬಾಯಿ ಕೊಲೆ ಮಾಡಿದ್ದಾಳೆ. ಇಬ್ಬರು ಸೇರಿ ತಲೆದಿಂಬು ಹಾಗೂ ಗೋವಿನಜೋಳ ಚೀಲದಿಂದ ಪತಿಯ ಉಸಿರುಗಟ್ಟಿಸಿ, ಕೊಲೆ ಮಾಡಿ, ಬಳಿಕ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಲಕ್ಷ್ಮೀಬಾಯಿ ಊರಿನವರೆದುರು ಬಿಂಬಿಸಿದ್ದಳು. ಇದನ್ನೂ ಓದಿ: ಸ್ಟೈಲಿಶ್ ಹುಡುಗರನ್ನು ಕಂಡರೆ ಆಂಟಿ ಆಗ್ತಾಳೆ ಬಲು ತುಂಟಿ
Advertisement
Advertisement
ಗ್ರಾಮಸ್ಥರೆಲ್ಲರೂ ಲಕ್ಷ್ಮೀಬಾಯಿ ಮಾತನ್ನೇ ನಿಜವೆಂದು ನಂಬಿ ಭೀಮನಗೌಡರ ಅಂತ್ಯಸಂಸ್ಕಾರ ಕೂಡಾ ಮಾಡಿದ್ದರು. ಆದರೆ ಈ ಸಂಬಂಧ ಲಕ್ಷ್ಮೀಬಾಯಿಯನ್ನು ವಿಚಾರಣೆ ನಡೆಸಿದ ಹುನಗುಂದ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಇದನ್ನೂ ಓದಿ: 2ನೇ ಮದ್ವೆಗಾಗಿ ಪತ್ನಿ, ಇಬ್ಬರು ಮಕ್ಕಳನ್ನು ಕೊಂದವನಿಗೆ ಗಲ್ಲು ಶಿಕ್ಷೆ
Advertisement
ಎರಡು ಮಕ್ಕಳ ತಾಯಿಯಾಗಿದ್ದ ಲಕ್ಷ್ಮೀಬಾಯಿ ಹಾಗೂ ಶಿವನಗೌಡ ಮೂರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಭೀಮನಗೌಡರಿಗೆ ಗೊತ್ತಾದಾಗ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತೆ ಎಂದು ಪ್ರಿಯಕರನ ಜೊತೆ ಸೇರಿ ಲಕ್ಷ್ಮೀಬಾಯಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೆ ಭೀಮನಗೌಡನವರದ್ದು ಆತ್ಮಹತ್ಯೆ ಎಂದು ನಂಬಿದ್ದ ಊರಿನವರು ಪತ್ನಿಯೇ ಕೊಲೆ ಮಾಡಿರುವ ಬಗ್ಗೆ ತಿಳಿದು ಬೆಚ್ಚಿಬಿದ್ದಿದ್ದಾರೆ.