ಚಿಕ್ಕಬಳ್ಳಾಪುರ: ಚಿಂತಾಮಣಿ (Chikkaballapur) ನಗರದ ಜೆ.ಜೆ. ಕಾಲೋನಿಯಲ್ಲಿ ಅಕ್ಕ-ತಂಗಿಯನ್ನು (Duble Murder) ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಏಜಾಜ್ ಪೊಲೀಸರಿಗೆ ಶರಣಾಗಿದ್ದಾನೆ.
ಕೊಲೆ ನಡೆದ ಬಳಿಕ ಪರಾರಿಯಾಗಿದ್ದ ಆತ, ಕೋಲಾರ ನಗರಕ್ಕೆ ತೆರಳಿ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಭಾನುವಾರ ನಡೆದ ಈ ಭೀಕರ ಘಟನೆಯಲ್ಲಿ ರೇಷ್ಮಾ (21) ಮತ್ತು ಶಮಾ (25) ಎಂಬ ಅಕ್ಕ-ತಂಗಿ ಮೃತಪಟ್ಟಿದ್ದರು.
ಮೃತ ಶಮಾ ಅವರ ಪತಿ ಏಜಾಜ್ ಮೇಲೆಯೇ ಆರಂಭದಿಂದಲೂ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ ಪತ್ನಿ ಹಾಗೂ ನಾದಿನಿಯನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: ಮಳೆಗಾಗಿ ಇಳಕಲ್‌ನಲ್ಲಿ ಗುರ್ಜಿ ಆಚರಣೆ – ಕಪ್ಪೆ ಮೆರವಣಿಗೆ, ಹೆಣ್ಣು ವೇಷ ಧರಿಸಿದ ಗಂಡು ಮಕ್ಕಳು!
ಘಟನೆ ನಡೆದ ಬಳಿಕ ಏಜಾಜ್ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಕೋಲಾರದ ಗಲ್‌ಪೇಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುಟುಂಬ ಕೆಲವು ವರ್ಷಗಳ ಹಿಂದೆ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿತ್ತು ಎನ್ನಲಾಗಿದೆ. ಇತ್ತ, ಆರೋಪಿ ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ; ರೈತರ ಜಮೀನುಗಳಲ್ಲಿ ಕೇಬಲ್ ಕಳ್ಳತನ – ಇಬ್ಬರು ಕಳ್ಳರನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು
