ನವದೆಹಲಿ/ಬೆಂಗಳೂರು: ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ಈಗ ಮತ್ತೊಂದು ಬ್ಯಾಡ್ ನ್ಯೂಸ್ ಸಿಕ್ಕಿದೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದಾಗಿ ಸೇಬು ಹಣ್ಣಿನ (Apple) ಇಳುವರಿ ಕಡಿಮೆಯಾಗಿ, ಬೆಲೆ ಏರಿಕೆಯಾಗುವ (Price Hike) ಸಾಧ್ಯತೆ ಹೆಚ್ಚಿದೆ.
ಇದೀಗ ಬೆಲೆ ಏರಿಕೆಯ ಕ್ಯೂನಲ್ಲಿ ಸೇಬುಹಣ್ಣು ಬಂದು ನಿಂತಿದೆ. ಅಕಾಲಿಕ ಮಳೆ, ಹವಾಮಾನದಲ್ಲಿ ವೈಪರೀತ್ಯದಿಂದಾಗಿ ಅರ್ಧದಷ್ಟು ಬೆಳೆ ಕೈಕೊಟ್ಟಿದೆ. ಹಿಮಾಚಲ ಪ್ರದೇಶದಲ್ಲಿ (Himachal Pradesh) ಕಳೆದ ವರ್ಷ 6.99 ಲಕ್ಷ ಮೆಟ್ರಿಕ್ ಟನ್ ಸೇಬು ಹಣ್ಣಿನ ಇಳುವರಿ ಬಂದಿತ್ತು. ಈ ವರ್ಷ ಇದು ಕೇವಲ 2.63 ಲಕ್ಷ ಮೆಟ್ರಿಕ್ ಟನ್‌ಗೆ ಕುಸಿದಿದೆ. ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗಿ – ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಇರಾನ್
ಇನ್ನೂ ಕಳೆದ ವರ್ಷ 2025ರಲ್ಲಿ 2.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೇಬು ಬೆಳೆಯಲಾಗಿತ್ತು. ಆದರೆ ಈ ವರ್ಷ ಕೇವಲ 1.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಸೇಬು ಬೆಳೆಯಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು 2.5 ಲಕ್ಷ ಕುಟುಂಬಗಳು ಸೇಬು ಬೆಳೆ ಬೆಳೆಯುತ್ತಾರೆ. ಆದರೆ ಈ ಬಾರಿ ಬೆಲೆ ಏರಿಕೆ ಹಾಗೂ ಸೇಬಿಗೆ ಸಿಂಪಡಿಸುವ ಔಷಧಿಗಳ ದರ ಏರಿಕೆಯಿಂದಾಗಿ ಸೇಬು ಬೆಳೆ ಬೆಳೆಯದಿರಲು ಕಾರಣ ಅಂತಿವೆ ಕುಟುಂಬಗಳು.
ಈ ಮೂಲಕ ಈ ಬಾರಿ ಒಟ್ಟು 4.36 ಲಕ್ಷ ಮೆಟ್ರಿಕ್ ಟನ್ ಸೇಬು ಹಣ್ಣಿನ ಕೊರತೆಯಾಗಿದೆ. ಈ ಎಲ್ಲ ಸಮಸ್ಯೆಗಳಿಂದಾಗಿ ಈ ಬಾರಿ ಮಾರುಕಟ್ಟೆಯಲ್ಲಿ ಸೇಬಿನ ಕೊರತೆ ಉಂಟಾಗಿ ದರ ಏರಿಕೆ ಆಗುವ ಸಾಧ್ಯತೆ ಇದೆ.ಇದನ್ನೂ ಓದಿ: ಈ ಪಾಪಕೃತ್ಯ ಮಾಡಿದ ಪ್ರತಿಯೊಬ್ಬರನ್ನೂ ಮೋದಿ, ಯೋಗಿ ಶಿಕ್ಷಿಸುತ್ತಾರೆ: ಮೌನಮುರಿದ ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ
