Connect with us

ಕೋವಿಡ್‌ನಿಂದ ಗಂಡ, ಹೆಂಡ್ತಿ ಸಾವು: ಅನಾಥವಾಯ್ತು ನಾಲ್ಕೂವರೆ ವರ್ಷದ ಮಗು

ಕೋವಿಡ್‌ನಿಂದ ಗಂಡ, ಹೆಂಡ್ತಿ ಸಾವು: ಅನಾಥವಾಯ್ತು ನಾಲ್ಕೂವರೆ ವರ್ಷದ ಮಗು

ಚಾಮರಾಜನಗರ: ಗಂಡ, ಹೆಂಡತಿ ಕೋವಿಡ್‍ನಿಂದ ಮೃತಪಟ್ಟಿದ್ದು, ನಾಲ್ಕೂವರೆ ವರ್ಷದ ಹೆಣ್ಣುಮಗಳು ಅನಾಥಳಾಗಿದ್ದಾಳೆ.

ಗುರುಪ್ರಸಾದ್ ಹಾಗೂ ಅವರ ಪತ್ನಿ ರಶ್ಮಿ ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ಇವರು ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ನಿವಾಸಿಗಳಾಗಿದ್ದಾರೆ. ದಂಪತಿ ಸಾವಿನಿಂದ ಅವರ ಮಗು ಅನಾಥವಾಗಿದೆ.

 

ಕೊರೊನಾ ಸೋಂಕಿನಿಂದ ಗಂಡ-ಹೆಂಡತಿ ಇಬ್ಬರೂ ಹೋಮ್ ಐಸೋಲೇಷನ್‍ನಲ್ಲಿದ್ದರು. ಗುರುಪ್ರಸಾದ್ ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರು. ಹೋಂ ಐಸೋಲೇಷನ್ ನಲ್ಲಿದ್ದ ಗುರುಪ್ರಸಾದ್ ಪತ್ನಿ ರಶ್ಮಿ ಕಳೆದ ರಾತ್ರಿ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅಜ್ಜ,ಅಜ್ಜಿಗೆ ಕೂಡ ಕೋವಿಡ್ ದೃಢವಾಗಿದ್ದು,ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗು ಮನೆಯಲ್ಲಿ ಆಟವಾಡಿಕೊಂಡು ಇದ್ದು,ಅಪ್ಪ ಅಮ್ಮ ಸಾವನ್ನಪ್ಪಿರೋ ಪರಿವೇ ಇಲ್ಲವಾಗಿದೆ.