– ಲೋಕ ಅದಾಲತ್ ಪ್ರಕ್ರಿಯೆಯನ್ನು ರಾಷ್ಟ್ರೀಯ ಹಬ್ಬ ಎಂದ ನ್ಯಾಯಾಧೀಶೆ
ಕೋಲಾರ: ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ಗೆ (Lok Adalat) ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ರಾಜಿ ಸಂಧಾನದ ಮೂಲಕ ಆರು ದಂಪತಿ (Couples) ಒಂದಾಗಿದ್ದಾರೆ.
ಇದು ಕಕ್ಷಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಸಣ್ಣ ಪುಟ್ಟ ಕಾರಣಗಳಿಗೆ ವಿಚ್ಛೇದನದ (Divorce) ಹಾದಿ ಹಿಡಿದಿದ್ದ ದಂಪತಿ ಪರಸ್ಪರ ಹೂವಿನ ಹಾರ ಬದಲಾಯಿಸಿಕೊಂಡು, ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಬಾರಿಯ ಲೋಕ ಅದಾಲತ್‌ನ ಪ್ರಮುಖ ಆಕರ್ಷಣೆಯಾಗಿದೆ. ಕೋಲಾರದ ಕೋರ್ಟ್ ಆವರಣದಲ್ಲಿ ನಡೆದ ಮೆಗಾ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು. ಇದನ್ನೂ ಓದಿ: ಕೆಂಪುಕೋಟೆಗೆ ಬಾಂಬ್ ಬೆದರಿಕೆ: ತೀವ್ರ ಶೋಧದ ಬಳಿಕ ಹುಸಿ ಕರೆ ಎಂದು ದೃಢಪಡಿಸಿದ ಪೊಲೀಸರು
ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ಬಾಕಿ ಉಳಿದಿದ್ದ ಅನೇಕ ಸಿವಿಲ್, ಕ್ರಿಮಿನಲ್ ಹಾಗೂ ಕೌಟುಂಬಿಕ ಪ್ರಕರಣಗಳನ್ನು ಉಭಯ ಪಕ್ಷಕಾರರ ಸಮ್ಮತಿಯೊಂದಿಗೆ ರಾಜಿ ಸಂಧಾನದ ಮೂಲಕ ಸುಖಾಂತ್ಯಗೊಳಿಸಲಾಯಿತು. ನ್ಯಾಯಾಲಯದ ಕದ ತಟ್ಟುವ ಕಕ್ಷಿದಾರರಿಗೆ ಸಂಧಾನಕಾರರ ಮೂಲಕ ತಿಳಿಹೇಳಿ, ಅವರ ವೈವಾಹಿಕ ಜೀವನವನ್ನು ಮತ್ತೆ ಸರಿದಾರಿಗೆ ತರುವ ಅದಾಲತ್‌ಗೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿತ್ತು. ಕಳೆದ ಎರಡು-ಮೂರು ತಿಂಗಳುಗಳಿಂದ ಪ್ರೀ-ಸಿಟ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಿ, ಕಕ್ಷಿದಾರರ ಮನವೊಲಿಸುವ ಕಾರ್ಯವನ್ನು ಮಾಡಲಾಗಿತ್ತು. ಈ ಅದಾಲತ್‌ನಲ್ಲಿ ಮುಖ್ಯವಾಗಿ ಈ ಕೆಳಗಿನ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಇದನ್ನೂ ಓದಿ: ತೀವ್ರಗೊಂಡ ಬಿಡದಿ ಟೌನ್‌ಶಿಪ್ ಜಟಾಪಟಿ – ಭೈರಮಂಗಲದಲ್ಲಿ ರೈತರ ಪರ-ವಿರೋಧ ಘರ್ಷಣೆ
ಕೌಟುಂಬಿಕ ವ್ಯಾಜ್ಯಗಳಾದ ವಿಚ್ಛೇದನ ಹಾಗೂ ಜೀವನಾಂಶ ಪ್ರಕರಣಗಳು. ಆಸ್ತಿ ವಿವಾದಗಳಾದ ವಿಭಾಗದ ದಾವೆಗಳು, ಡಿಕ್ಲರೇಷನ್ ಮತ್ತು ಇಂಜಂಕ್ಷನ್ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳಾದ ಎನ್.ಐ ಆಕ್ಟ್ ಹಾಗೂ ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಅಲ್ಲದೇ ಪ್ರೀ-ಲಿಟಿಗೇಷನ್ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಬಗೆಹರಿಸಿಕೊಳ್ಳಲಾಯಿತು. ಕೌಟುಂಬಿಕ ನ್ಯಾಯಾಲಯದಲ್ಲಿ ಇಂದು ಆರು ದಂಪತಿಗಳು ರಾಜಿ ಮಾಡಿಕೊಂಡು ಒಂದಾಗಿದ್ದು, ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಇದನ್ನೂ ಓದಿ: ವಿಯೆಟ್ನಾಂನ ಫು ಕ್ವಾಕ್ ದ್ವೀಪದಲ್ಲಿ ಭಾರತೀಯ ಪ್ರವಾಸಿಗರನ್ನ ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಡೆ
ಮುಂದಿನ ದಿನಗಳಲ್ಲಿ ಈ ಸಂಖ್ಯೆ 12, 24ಕ್ಕೆ ಏರಿಕೆಯಾಗಲಿ, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಗಳೇ ಇಲ್ಲದಂತಾಗಲಿ ಎಂಬುದೇ ನಮ್ಮ ಆಶಯ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ನ್ಯಾಯಾಧೀಶರಾದ ಬಿ. ಎಸ್. ಜಯಶ್ರೀ ಅವರು ಲೋಕ ಅದಾಲತ್ ಪ್ರಕ್ರಿಯೆಯನ್ನು ರಾಷ್ಟ್ರೀಯ ಹಬ್ಬ ಎಂದು ಬಣ್ಣಿಸಿದರು. ಇದೇ ವೇಳೆ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಎಂ.ಆನಂದ ಶೆಟ್ಟಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಲ್.ಶ್ರೀನಿವಾಸ್ ಸೇರಿದಂತೆ ನ್ಯಾಯಾಧೀಶರು ಹಾಗೂ ವಕೀಲರು ಇದ್ದರು. ಇದನ್ನೂ ಓದಿ: ಮಟನ್ ಅಂತ ಹೇಳಿ ಕೋಳಿ ಮಾಂಸದೂಟ ಬಡಿಸಿದ್ದಕ್ಕೆ ಗಲಾಟೆ – ಮದುವೆ ಮನೆಯಲ್ಲಿ ಹೊಡೆದಾಡಿಕೊಂಡ ಜನ
