– ಪೊಲೀಸರ ಮಧ್ಯಪ್ರವೇಶ
ರಾಮನಗರ: ಬಿಡದಿ ಟೌನ್‌ಶಿಪ್ (Bidadi Township) ಜಟಾಪಟಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಒಂದೆಡೆ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಇಂದು 486ನೇ ದಿನಕ್ಕೆ ಕಾಲಿಟ್ಟಿದೆ. ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರೂ (Farmers) ಕೂಡಾ ಪ್ರತಿಭಟನೆ ನಡೆಸುತ್ತಿದ್ದು, ಪರ-ವಿರೋಧ ರೈತರ ನಡುವೆ ಇದೀಗ ಘರ್ಷಣೆ ಉಂಟಾಗಿ ವಾಗ್ವಾದ ಏರ್ಪಟ್ಟಿದೆ.
ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧದ ರೈತರ ಹೋರಾಟಕ್ಕೆ ಈಗ ಇಡೀ ರಾಜ್ಯದ ರೈತ ಸಂಘಟನೆಗಳು ಆನೆಬಲ ತುಂಬಿವೆ. ಇಂದು 486ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಗೆ ಬೆಂಬಲ ನೀಡಲು ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಮಂಡ್ಯ, ಮೈಸೂರು, ಹಾಸನ ಸೇರಿ ಬರೋಬ್ಬರಿ 15ಕ್ಕೂ ಹೆಚ್ಚು ಜಿಲ್ಲೆಗಳ ರೈತ ಮುಖಂಡರು ಮತ್ತು ಹೋರಾಟಗಾರರು ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಭೈರಮಂಗಲ ಗ್ರಾಮದಲ್ಲಿ ಬೃಹತ್ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬೆನ್ನಲ್ಲೇ 18 ತಿಂಗಳ ಮಗು ಸಾವು

ಇನ್ನೂ ರೈತರ ಹೋರಾಟಕ್ಕೆ ಬೆಂಬಲ ನೀಡಲು ಬಂದ ಹೊರ ಜಿಲ್ಲೆಯ ರೈತರಿಗೆ ಯೋಜನೆ ಪರ ಇರುವ ರೈತರು ತಡೆಯೊಡ್ಡುವ ಕೆಲಸ ಮಾಡಿದ್ದಾರೆ. ಈ ವೇಳೆ ರೈತರ ನಡುವೆ ವಾಗ್ವಾದ ನಡೆದು ತಳ್ಳಾಟ-ನೂಕಾಟ ಮಾಡಿಕೊಂಡರು. ಕಾರು, ಬಸ್ಸುಗಳನ್ನ ತಡೆದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಹೊರ ಜಿಲ್ಲೆಗಳಿಂದ ಬಂದಿದ್ದ ರೈತರನ್ನು ಯೋಜನೆ ಪರ ರೈತರು ತರಾಟೆಗೆ ತಗೆದುಕೊಂಡು, ನಮ್ಮ ಊರಿನ ವಿಚಾರಕ್ಕೆ ಹೊರಗಿನವರು ಬರೋದು ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ. ಉಭಯ ಬಣಗಳ ನಡುವೆ ತಳ್ಳಾಟ-ನೂಕಾಟ ನಡೆದು ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಎರಡೂ ಕಡೆಯವರನ್ನು ಸಮಾಧಾನಪಡಿಸಿ ಘರ್ಷಣೆಯನ್ನು ತಪ್ಪಿಸಿದ್ದಾರೆ. ಇದನ್ನೂ ಓದಿ: ಮಸೀದಿ ಗೋಡೆಗಳ ನಿರ್ಮಾಣಕ್ಕೆ ದೇಣಿಗೆ ಬಳಸಿದ್ದಾರೆ – ರಾಮನ ದೇಣಿಗೆ ವಿವಾದದ ನಡುವೆ ಸಿಎಂ ಯೋಗಿ ಬಾಂಬ್

ಇನ್ನೂ ವಿರೋದಧ ನಡುವೆಯೂ ಭೈರಮಂಗಲ ಸರ್ಕಲ್‌ನಲ್ಲಿ ಯೋಜನೆ ವಿರೋಧಿಸಿ ರೈತರು ಬೃಹತ್ ರೈತ ಸಮಾವೇಶ ನಡೆಸಿದರು. ಕಾರ್ಯಕ್ರಮದಲ್ಲಿ ರೈತ ಹೋರಾಟಗಾರರಾದ ರೈತ ಚುಕ್ಕಿ ನಂಜುಂಡಸ್ವಾಮಿ, ಹೊನ್ನೂರು ಪ್ರಕಾಶ್, ಕೆ.ಟಿ.ಗಂಗಾಧರ್ ಅನೇಕರು ಭಾಗಿಯಾಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರೈತರ ಕೃಷಿ ಭೂಮಿ ಕಿತ್ತುಕೊಂಡು ಟೌನ್‌ಶಿಪ್ ಮಾಡೋದು ಸರಿಯಲ್ಲ, ಬಲವಂತವಾಗಿ ಭೂಸ್ವಾಧೀನ ಮಾಡಿ ಸರ್ಕಾರದ ದರ್ಪ ತೋರುತ್ತಿದೆ. ಯಾವುದೇ ಕಾರಣಕ್ಕೂ ಪ್ರಾಣ ಬಿಟ್ಟರು ನಾವು ಭೂಮಿ ಬಿಡಲ್ಲ. ಸರ್ಕಾರ ಅಭಿವೃದ್ಧಿ ಮಾಡಬೇಕು ಅಂದ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಮಾಡಲಿ. ಅದನ್ನ ಬಿಟ್ಟು ಕೃಷಿ ಭೂಮಿ ಹಾಳು ಮಾಡಬೇಡಿ, ರಾಜಕೀಯ ಪ್ರತಿಷ್ಠೆಗೆ ರೈತರನ್ನ ಬಲಿಕೊಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಹೆರಿಗೆ ವೇಳೆ ತೀವ್ರ ರಕ್ತಸ್ರಾವವಾಗಿ ಬಾಣಂತಿ ಸಾವು – ವೈದ್ಯರ ನಿರ್ಲಕ್ಷ್ಯ ಆರೋಪ

ಒಟ್ಟಾರೆ ಬಿಡದಿ ಟೌನ್‌ಶಿಪ್ ಪರ-ವಿರೋಧದ ಜಟಾಪಟಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಯೋಜನೆ ವಿರುದ್ಧ ರೈತರ ಆಕ್ರೋಶ ಹೆಚ್ಚಾಗಿದ್ರೆ, ಇದೀಗ ಯೋಜನೆ ಪರ ಇರುವ ರೈತರು ಹೋರಾಟಕ್ಕಿಳಿದು ಭೈರಮಂಗಲ ಗ್ರಾಮದಲ್ಲಿ ಘರ್ಷಣೆಗೆ ಕಾರಣವಾಗಿದೆ. ಇದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪಂಚಾಯತ್ ಚುನಾವಣೆ: ಈಶ್ವರ ಖಂಡ್ರೆ
