ಪಾಟ್ನಾ: ಮಟನ್ ಊಟ ಅಂತ ಹೇಳಿ ಕೋಳಿ ಊಟ ಬಡಿಸಿದ್ದಕ್ಕೆ ಮದುವೆ ಮನೆಯಲ್ಲೇ ಜಗಳವಾಗಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ.
ಮದುವೆಯಲ್ಲಿ ಮಧ್ಯಾಹ್ನದ ಊಟ ಬಡಿಸುವವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಊಟದ ವೇಳೆ ಮಟನ್ ವಿಚಾರಕ್ಕೆ ಗಂಡು-ಹೆಣ್ಣಿನ ಕಡೆಯವರ ನಡುವೆ ಭೀಕರ ಜಗಳವಾಗಿ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಸೀದಿ ಗೋಡೆಗಳ ನಿರ್ಮಾಣಕ್ಕೆ ದೇಣಿಗೆ ಬಳಸಿದ್ದಾರೆ – ರಾಮನ ದೇಣಿಗೆ ವಿವಾದದ ನಡುವೆ ಸಿಎಂ ಯೋಗಿ ಬಾಂಬ್
ಕಾರಣ ಏನು?
ವಧುವಿನ ಕಡೆಯವರು ವರನ ಕಡೆಯವರಿಗೆ ಮಟನ್ ಅಡುಗೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಬದಲಿಗೆ ಕೋಳಿ ಮಾಂಸದೂಟ ಬಡಿಸಿದ್ದರು. ಇದರಿಂದ ಕೋಪಗೊಂಡ ವರನ ಕಡೆಯವರು ಪ್ರತಿಭಟಿಸಿದರು. ಈ ವೇಳೆ ಎರಡೂ ಕಡೆಯವರ ನಡುವೆ ಜಗಳವಾಗಿದೆ.
ಬಿಹಾರದ ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಿಯಾರ್ಪುರ್ ಪಟ್ಟಣದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಅನ್ವರ್ ಅವರ ಪುತ್ರ ಮೊಹಮ್ಮದ್ ಅಬ್ದುಲ್ಲಾ ಅಲಿಯಾಸ್ ಚಂದ್ ಜೊತೆ ಮೊಹಮ್ಮದ್ ಜಾವೇದ್ ಅಲಿಯಾಸ್ ಮೋಟೋ ಅವರ ಮಗಳೊಂದಿಗೆ ನೆರವೇರಿಸಲಾಗಿತ್ತು. ಇದನ್ನೂ ಓದಿ: ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬೆನ್ನಲ್ಲೇ 18 ತಿಂಗಳ ಮಗು ಸಾವು
ಜಗಳದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಗಾಯಾಳುಗಳನ್ನು ಸಿಮ್ರಿ ಭಕ್ತಿಯಾರ್ಪುರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
