Connect with us

Dharwad

ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮತ್ತೊಂದು ಎಡವಟ್ಟು- ಫಿಟ್ಸ್ ಬಂದು ಒದ್ದಾಡ್ತಿದ್ರೂ ಚಿಕಿತ್ಸೆ ನೀಡದ ವೈದ್ಯರು

Published

on

ಹುಬ್ಬಳ್ಳಿ: ಪ್ರತಿಷ್ಠಿತ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಫಿಟ್ಸ್ ಬಂದು ರೋಗಿ ಒದ್ದಾಡುತ್ತಿದ್ದರೂ ಕೂಡ ವೈದ್ಯರು ಚಿಕಿತ್ಸೆ ನೀಡದೆ ಅಮಾನವೀಯತೆ ಮೆರೆದಿದ್ದಾರೆ.

ಆಸ್ಪತ್ರೆಯ ಮಂಚದ ಕೆಳಗೆ ಬಿದ್ದು ರೋಗಿ ಒದ್ದಾಡುತ್ತಿದ್ದ. ಆದರೆ ರೋಗಿಯನ್ನು ನೋಡಿಯೂ ನೋಡಂದಂತೆ ಆಸ್ಪತ್ರೆಯ ಸಿಬ್ಬಂದಿ ಇದ್ದು ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಸಾರ್ವಜಿಕರು ಸಿಬ್ಬಂದಿ ಮಾನವೀಯತೆ ಕಳೆದುಕೊಂಡಿದ್ದರಾ ಎಂದು ಪ್ರಶ್ನಿಸಿದ್ದಾರೆ.

ಫಿಟ್ಸ್ ಬಂದು 15 ನಿಮಿಷಗಳ ಕಾಲ ರೋಗಿ ಒದ್ದಾಟ ನಡೆಸಿದ್ದರು. ಈ ವೇಳೆ ಕಬ್ಬಿಣದ ಮಂಚಕ್ಕೆ ಫಿಟ್ಸ್ ರೋಗಿ ತಲೆ ತಾಗಿದ್ದರೆ ಮತ್ತೊಂದು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯರು ಇದ್ದರು ಕೂಡ ರೋಗಿ ನೆಲದ ಮೇಲೆ ಬಿದ್ದು ಒದ್ದಾಟ ನಡೆಸುತ್ತಿದ್ದರು ಕೂಡ ಚಿಕಿತ್ಸೆ ನೀಡಲು ತಡಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಕಿಮ್ಸ್ ಅಧೀಕ್ಷಕರಾದ ರಾಮಲಿಂಗಪ್ಪ ಅವರು, ರಾತ್ರಿ 1.30ಕ್ಕೆ ಘಟನೆ ನಡೆದಿದ್ದು, ಆ ರೋಗಿ ಫಿಟ್ಸ್ ಬಂದು ನೆಲಕ್ಕೆ ಬಿದ್ದಿರಲಿಲ್ಲ. ತುರ್ತು ಸೇವೆಯ ಅಗತ್ಯವಿದ್ದ ಕಾರಣ ಬೇರೆ ರೋಗಿಗೆ ವೈದರು ಚಿಕಿತ್ಸೆ ನೀಡುತ್ತಿದ್ದರು. ಆದ್ದರಿಂದ ಈ ರೋಗಿಗೆ ಚಿಕಿತ್ಸೆ ನೀಡಲು 5 ನಿಮಿಷ ತಡವಾಗಿತ್ತು ಎಂದರು.

ಆಸ್ಪತ್ರೆಗೆ ನಡೆದುಕೊಂಡೆ ಬಂದಿದ್ದ ರೋಗಿ ಪಾನಮತ್ತರಾಗಿದ್ದರು. ಆದ್ದರಿಂದ ಕೆಳಕ್ಕೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ರೋಗಿಗೆ ತುರ್ತು ಚಿಕಿತ್ಸೆ ಅಗತ್ಯವಿತ್ತು. ಆದ್ದರಿಂದಲೇ ತಡವಾಗಿದೆ. ಕೂಡಲೇ ನಾವು ಈ ರೋಗಿಗೂ ಚಿಕಿತ್ಸೆ ನೀಡಿದ್ದೇವೆ. ಆಸ್ಪತ್ರೆಯ ಸಿಬ್ಬಂದಿ ಯಾವುದೇ ನಿರ್ಲಕ್ಷ್ಯ ತೋರಿಲ್ಲ. ಇನ್ನು ಮುಂದೇ ಇಂತಹ ಘಟನೆಗಳು ಪುನರವರ್ತನೆಯಾಗದಂತೆ ಹೆಚ್ಚು ಜಾಗೃತಿ ವಹಿಸುವುದಾಗಿ ಹೇಳಿದರು.