ರವೆ ಉಂಡೆ ಮಾಡುವುದು ತುಂಬಾ ಸುಲಭ. ಮನೆಗೆ ಅತಿಥಿ ಬಂದಾಗ ಏನಾದರೂ ದಿಢೀರ್ ಎಂದು ಸಿಹಿ ಮಾಡಬೇಕು ಎಂದರೆ ಈ ತಿಂಡಿಯನ್ನು ಟ್ರೈ ಮಾಡಿ. ಏಕೆಂದರೆ ಈ ರೆಸಿಪಿ ಮಾಡಲು ಸುಲಭ. ಅಚ್ಟೇ ಅಲ್ಲದೇ ಇದನ್ನು ತಿನ್ನಲು ತುಂಬಾ ರುಚಿಯಾಗಿ ಇರುತ್ತೆ.
Advertisement
ಬೇಕಾಗಿರುವ ಪದಾರ್ಥಗಳು:
* ರವೆ – 1 ಕಪ್
* ತುಪ್ಪ – ¼ ಕಪ್
* ಕತ್ತರಿಸಿದ ಗೋಡಂಬಿ – 6
* ಒಣದ್ರಾಕ್ಷಿ – 2 ಟೇಬಲ್ ಸ್ಪೂನ್
* ತೆಂಗಿನಕಾಯಿ ತುರಿ – ¼ ಕಪ್
Advertisement
* ಸಕ್ಕರೆ – 1 ಕಪ್
* ನೀರು – ¼ ಕಪ್
* ಏಲಕ್ಕಿ ಪುಡಿ – ¼ ಟೀಸ್ಪೂನ್
* ಹಾಲು – 2 ಟೇಬಲ್ ಸ್ಪೂನ್
Advertisement
ಮಾಡುವ ವಿಧಾನ:
* ಮೊದಲನೆಯದಾಗಿ, ದೊಡ್ಡ ಪ್ಯಾನ್‍ನಲ್ಲಿ ಕತ್ತರಿಸಿದ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿ. ಒಣದ್ರಾಕ್ಷಿ ಮತ್ತು ಗೋಡಂಬಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಅವುಗಳನ್ನು ತಟ್ಟೆಗೆ ವರ್ಗಾಯಿಸಿ ಮತ್ತು ಪಕ್ಕಕ್ಕೆ ಇರಿಸಿ.
* ಬಾಣಲೆಯಲ್ಲಿ ರವಾ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ. ತಿಳಿ ಕಂದು ಬಣ್ಣಕ್ಕೆ ಬದಲಾಯಿಸುವವರೆಗೆ ಮತ್ತು ಪರಿಮಳ ಬರುವವರೆಗೆ ಹುರಿಯಿರಿ.
* ನೀರ ಮತ್ತು ಸಕ್ಕರೆ ಸೇರಿಸಿ ಪಾಕವನ್ನು ತಯಾರಿಸಿ. ಸಕ್ಕರೆ ಕರಗುವವರೆಗೂ ಬೇರೆಸಿ 5 ನಿಮಿಷಗಳ ಕಾಲ ಕುದಿಸಿ.
Advertisement
* ತೆಂಗಿನಕಾಯಿ ತುರಿಯನ್ನು ಹುರಿದುಕೊಳ್ಳಿ. ಅದಕ್ಕೆ ರವಾ, ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಮತ್ತು ಸಕ್ಕರೆ ಪಾಕ ಮತ್ತು ಹಾಲನ್ನು ಸೇರಿಸಿ ಹುರಿಯಿರಿ.
* ನಂತರ ಆ ಮಿಶ್ರಣವನ್ನು ತೆಗೆದು ಕೈಗೆ ತುಪ್ಪ ಹಚ್ಚಿಕೊಂಡು ಉಂಡೆಗಳ ಮಾಡಿಕೊಳ್ಳಿ