ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸ ಗ್ರಾಮದ ಬೋರ್ ವೆಲ್‍ನಲ್ಲಿ ಕುದಿಯುವ ನೀರು ಬರುತ್ತಿದ್ದು ಜನರಿಗೆ ಕೌತುಕದ ಜೊತೆಗೆ ಆತಂಕ ಮೂಡಿಸಿದೆ.
ಗ್ರಾಮದ ಪರಮೇಶ್ವರಪ್ಪ ಎಂಬವರ ಮನೆ ಹಿತ್ತಲಿನಲ್ಲಿದ್ದ ಬೋರ್ ವೆಲ್‍ನಲ್ಲಿ ಕುದಿಯುವ ನೀರು ಬರುತ್ತಿದೆ. ಮೊದಲು 2 ರಿಂದ 3 ನಿಮಿಷ ಬಿಸಿನೀರು ಬಂದು ನಂತರ ಮತ್ತೆ ತಣ್ಣೀರು ಬರುತ್ತಿದೆ. ಸುಮಾರು 34 ವರ್ಷದ ಹಿಂದೆ ಈ ಕೊಳವೆ ಬಾವಿ ಕೊರೆಸಲಾಗಿದ್ದು ಇದು ಊರಿನವರ ನೀರಿನ ಅವಶ್ಯಕತೆ ಪೂರೈಸುತ್ತಿತ್ತು.
Advertisement
Advertisement
ಇತ್ತೀಚೆಗೆ ಈ ಬಾವಿಯಲ್ಲಿ ಬಿಸಿ ನೀರು ಬಂದಿರುವುದು ಅಚ್ಚರಿ ತಂದಿದೆ. ಗ್ರಾಮದ ಈ ಬೋರ್ ವೆಲ್ ಒಂದರಲ್ಲಿ ಮಾತ್ರ ಈ ರೀತಿಯ ಅಚ್ಚರಿ ಕಾಣಿಸಿಕೊಂಡಿದ್ದು, ಬೇರೆ ಯಾವುದೇ ಬೋರ್ ವೆಲ್‍ಗಳಲ್ಲೂ ಬಿಸಿನೀರು ಬಂದಿಲ್ಲ. ಬೋರ್ ವೆಲ್‍ನಲ್ಲಿ ಬಿಸಿ ನೀರು ಬರಲು ತಾಂತ್ರಿಕ ಸಮಸ್ಯೆ ಅಥವಾ ಅಂತರ್ಜಲದಲ್ಲಿ ಏರುಪೇರಾಗಿದೆಯಾ ಎಂಬ ಅನುಮಾನ ಸದ್ಯ ಗ್ರಾಮಸ್ಥರಲ್ಲಿ ಮೂಡಿದೆ. ಇತ್ತ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಇಂತಹ ಬಿಸಿನೀರಿನ ಒರತೆ ಇದೆಯ ಎಂಬ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv