InternationalLatestMain Post

ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ತನ್ನ ಇಚ್ಛೆಯ ವಿರುದ್ಧವಾಗಿ ಮಗಳು ಮದುವೆಯಾಗಿದಕ್ಕೆ ಇಬ್ಬರು ಹೆಣ್ಣುಮಕ್ಕಳು ಮತ್ತು ನಾಲ್ಕು ಮೊಮ್ಮಕ್ಕಳನ್ನು ಸೇರಿಸಿದಂತೆ ಕುಟುಂಬದ 7 ಮಂದಿಯನ್ನು ವ್ಯಕ್ತಿಯೋರ್ವ ಜೀವಂತವಾಗಿ ಸುಟ್ಟು ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

True Love 1024x626 1

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಜಫರ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮನ್ಜೂರ್ ಹುಸೇನ್ ಎಂದು ಗುರುತಿಸಲಾಗಿದೆ. ಮನ್ಜೂರ್ ಹುಸೇನ್ ಮನೆಗೆ ಬೆಂಕಿ ಹಚ್ಚಿದ್ದು, ಈ ವೇಳೆ ಮನೆಯಲ್ಲಿದ್ದ ಇಬ್ಬರು ಪುತ್ರಿಯರಾದ ಫೌಝಿಯಾ ಬೀಬಿ ಮತ್ತು ಖುರ್ಷಿದ್ ಮಾಯ್, ಆತನ ಪತ್ನಿ, ಮಗ, ತಾಯಿ, ತಂದೆ ಸೇರಿಸಿದಂತೆ ನಾಲ್ವರು ಅಪ್ರಾಪ್ತ ಮಕ್ಕಳು ಬೆಂಕಿಯಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅನ್ಯಧರ್ಮದ ಯುವಕನ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಗೆ ಥಳಿತ

love propose 2

ಘಟನೆಯಿಂದ ಬಚಾವ್ ಆಗಿರುವ ಫೌಝಿಯಾ ಬೀಬಿ ಪತಿ ಮೊಹಬೂಬ್ ಅಹ್ಮದ್ ಈ ಕುರಿತಂತೆ ಮಾವ ಮನ್ಜೂರ್ ಹುಸೇನ್ ಮತ್ತು ಆತನ ಪುತ್ರ ಸಬೀರ್ ಹುಸೇನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ವ್ಯಾಪಾರಕ್ಕೆಂದು ಮುಲ್ತಾನ್‍ನಲ್ಲಿದ್ದೆ. ಆದರೆ ನಾನು ಹಿಂದಿರುಗಿ ಮನೆಯ ಬಳಿ ಬಂದಾಗ ಬೆಂಕಿಯಿಂದ ಮನೆ ಹೊತ್ತಿ ಉರಿಸುತ್ತಿರುವುದನ್ನು ನೋಡಿದೆ ಮತ್ತು ಮನ್ಜೂರ್ ಹುಸೇನ್, ಸಬೀರ್ ಹುಸೇನ್ ಇಬ್ಬರು ಹೋಗುತ್ತಿರುವುದನ್ನು ಕಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ನೂತನ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಆದ್ಯತೆ: ಗೆಹ್ಲೋಟ್

marriage

ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಪ್ರೇಮವಿವಾಹ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದ್ದು, ನಂತರ ಈ ಘಟನೆ ಜರುಗಿದೆ. ಮೆಹಬೂಬ್ ಅಹ್ಮದ್ ಮತ್ತು ಬೀಬಿ 2020ರಲ್ಲಿ ವಿವಾಹವಾಗಿದ್ದರು. ಇದು ಅಂತರ್ ಜಾತಿ ವಿವಾಹವಾಗಿದ್ದರಿಂದ ಮನ್ಜೂರ್ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸ್ ಅಧಿಕಾರಿ ಅಬ್ದುಲ್ ಮಜೀದ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *