ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಮಾಡುತ್ತಿರುವ ಹಾನರ್ ತನ್ನ ನೂತನ ಆವೃತ್ತಿಯಾದ ಹಾನರ್ 8ಸಿ ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ನೂತನ ಹಾನರ್ 8ಸಿ ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಎಚ್‍ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13+2ಎಂಪಿ ಡ್ಯುಯಲ್ ಕ್ಯಾಮೆರಾವಿದೆ. ಮಿಡ್ ನೈಟ್ ಬ್ಲಾಕ್, ಅರೋರ ಬ್ಲ್ಯೂ ಹಾಗೂ ಪ್ಲಾಟಿನಂ ಗೋಲ್ಡ್ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿದೆ. ಡಿಸೆಂಬರ್ 10 ರಿಂದ ಆನ್‍ಲೈನ್ ಜಾಲತಾಣಗಳಲ್ಲಿ ಲಭ್ಯವಿರಲಿದೆ.
Advertisement
Advertisement
ಬೆಲೆ ಎಷ್ಟು?
4ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 11,999 ರೂ. 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 12,999 ರೂಪಾಯಿಯನ್ನು ನಿಗದಿಪಡಿಸಿದೆ.
Advertisement
ಹಾನರ್ 8ಸಿ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ:
157.2 X 76 X 7.98 ಮಿ.ಮೀ., 167 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.26 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720 X 1520 ಪಿಕ್ಸೆಲ್, 19:9 ಅನುಪಾತ 269ಪಿಪಿಐ)
Advertisement
The moment you have all been waiting for is finally here #Honor fans! Grab the #PackedWithPower 4+32GB #Honor8C at an amazing price of INR 11,999 & 4+64GB at INR 12,999! Exclusively on @amazonIN ! https://t.co/nxusrP2emL pic.twitter.com/PUDOTQ3zes
— Honor India (@HiHonorIndia) November 29, 2018
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್‍ಡ್ರಾಗನ್ 632, ಆಕ್ಟಾ ಕೋರ್ ಪ್ರೊಸೆಸರ್ 1.8 ಗೀಗಾಹರ್ಟ್ಸ್, ಅಡ್ರಿನೋ 506 ಗ್ರಾಪಿಕ್ ಪ್ರೊಸೆಸರ್, 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ, 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.
ಕ್ಯಾಮೆರಾ ಹಾಗೂ ಇತರೆ ಫೀಚರ್:
ಮುಂಭಾಗ 8 ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13+2 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್, ಫೋಟೋ ಲಾಕಿಂಗ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv