ಬಾಗಲಕೋಟೆ/ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಗಡಿ ಜಿಲ್ಲೆ ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಭಯ ಜಿಲ್ಲೆಗಳ ನದಿ ಪಾತ್ರಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಘಟಪ್ರಭಾ(Ghataprabha River) ಮತ್ತು ಕೃಷ್ಣಾ ನದಿಗಳ(Krishna River) ಒಳಹರಿವು ಗಣನೀಯವಾಗಿ ಏರಿಕೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಉಪನದಿಗಳಿಂದ ಹರಿದುಬರುತ್ತಿರುವ ಭಾರೀ ಪ್ರಮಾಣದ ನೀರಿನಿಂದಾಗಿ ಕೃಷ್ಣಾ ನದಿ ಕ್ಷಣ ಕ್ಷಣಕ್ಕೂ ಉಕ್ಕಿ ಹರಿಯುತ್ತಿದೆ. ಇತ್ತ ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಬರೋಬ್ಬರಿ 15 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಬಾಗಲಕೋಟೆ(Bagalkote) ರಬಕವಿ ಬನಹಟ್ಟಿ ತಾಲ್ಲೂಕಿನ ನಂದಗಾಂವ ಮತ್ತು ಬೆಳಗಾವಿ(Belagavi) ಜಿಲ್ಲೆಯ ಅವರಾದಿ ಗ್ರಾಮಗಳ ಮಧ್ಯೆ ಇರುವ ಪ್ರಮುಖ ಘಟಪ್ರಭಾ ಸೇತುವೆಯು ಪ್ರವಾಹದ ನೀರಿಗೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆಯ ಮೇಲೆ ಸುಮಾರು ಅರ್ಧ ಅಡಿಯಷ್ಟು ನೀರು ಹರಿಯುತ್ತಿರುವುದರಿಂದ ನಂದಗಾಂವ ಮತ್ತು ಬೆಳಗಾವಿ ಜಿಲ್ಲೆಯ ಅವರಾದಿ ನಡುವಿನ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಇದನ್ನೂ ಓದಿ: ತುಂಗಭದ್ರಾ ಜಲಾಶಯಕ್ಕೆ ಜೀವಕಳೆ: ಒಂದೇ ದಿನದಲ್ಲಿ 4 ಟಿಎಂಸಿಗೂ ಹೆಚ್ಚು ನೀರು ಸಂಗ್ರಹ
