ನ್ಯಾಚುರಲ್ ಸ್ಟಾರ್ ನಾನಿ (Naani) ಅಭಿನಯದ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್ ಸಿನಿಮಾ ‘ದಿ ಪ್ಯಾರಡೈಸ್’ (The Paradise) ಮಾಸ್ ಹಾಗೂ ಸ್ಫೋಟಕ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಅನಾವರಣಗೊಳಿಸಿದೆ.
‘ದಸರಾ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಶ್ರೀಕಾಂತ್ ಒಡೆಲ ಹಾಗೂ ನಾನಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಟೀಸರ್ ಮೂಲಕ ಪ್ರೇಕ್ಷಕರಲ್ಲಿ ತೀವ್ರ ಕೌತುಕವನ್ನು ಹೆಚ್ಚಿಸಿದೆ. ಎಸ್ಎಲ್ವಿ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಸುಧಾಕರ್ ಚೆರುಕೂರಿ ಈ ಚಿತ್ರವನ್ನು ಅತ್ಯಂತ ಬೃಹತ್ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಇದನ್ನು ಓದಿ: ನವೆಂಬರ್ 6ಕ್ಕೆ ಬೆಳ್ಳಿತೆರೆ ಮೇಲೆ ʻರಾಮಾಯಣʼ ದೈವಿಕ ಪರ್ವ ಶುರು
ಈ ಟೀಸರ್ ಪ್ರೇಕ್ಷಕರನ್ನು ಕತ್ತಲೆ, ದೌರ್ಜನ್ಯ ಮತ್ತು ಹಿಂಸೆಯಿಂದ ಕೂಡಿದ ಕಠೋರ ಜಗತ್ತಿಗೆ ಕರೆದೊಯ್ಯುತ್ತದೆ. ಈ ಶೋಷಿತರ ಪರವಾಗಿ ಮತ್ತು ಶಕ್ತಿಶಾಲಿಗಳ ಪಾಲಿನ ಸಿಂಹಸ್ವಪ್ನವಾಗಿ ‘ಜಡಾಲ್’ ಎಂಬ ಕ್ರಾಂತಿಕಾರಿ ಪಾತ್ರದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಚಿತ್ರದ ದೃಶ್ಯ ಕಥನದಲ್ಲಿ ಪದೇಪದೇ ಕಾಣಿಸಿಕೊಳ್ಳುವ ಕಾಗೆಯ ಸಂಕೇತವು ತಲೆಮಾರುಗಳಿಂದ ಮೂಲೆಗುಂಪಾದ ಜನರ ಆಕ್ರೋಶವನ್ನು ಬಿಂಬಿಸುತ್ತದೆ. ಕೊಡಲಿ ಕಾಳಗ, ತೀವ್ರ ಸ್ವರೂಪದ ಜೈಲು ಫೈಟ್, ಭೀಕರ ಖಡ್ಗಕಾಳಗ, ಮುಷ್ಟಿಕಾಳಗ ಹಾಗೂ ಸರಣಿ ಸ್ಫೋಟಗಳ ದೃಶ್ಯಗಳು ಹೈಲೈಟ್ ಆಗಿವೆ.
ಈ ಚಿತ್ರದಲ್ಲಿ ನಟ ನಾನಿ ಸಂಪೂರ್ಣ ವಿಭಿನ್ನ ಹಾಗೂ ಭಯ ಹುಟ್ಟಿಸುವ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದು, ಅವರ ಶಕ್ತಿಯುತ ಸಂಭಾಷಣೆ ಮತ್ತು ಆಕ್ರೋಶದ ನಟನೆ ಪ್ರೇಕ್ಷಕರನ್ನು ರಂಜಿಸಿದೆ. ಈ ಚಿತ್ರದಲ್ಲಿ ನಟ ಮೋಹನ್ ಬಾಬು ಅವರ ಎಂಟ್ರಿ ಖಡಕ್ ಆಗಿದ್ದು, ರಾಘವ್ ಜುಯಲ್, ಕಯಾದು ಲೋಹರ್, ಸೊನಾಲಿ ಕುಲಕರ್ಣಿ ಮತ್ತು ಸಂಪೂರ್ಣೇಶ್ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಖತ್ ಹೈಲೈಟ್ ಆಗಿದೆ. ಶ್ರೀಕಾಂತ್ ಒಡೆಲ ನಿರ್ದೇಶನದ ಈ ಸಿನಿಮಾವನ್ನು ಸುಧಾಕರ್ ಚೆರುಕೂರಿ ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಹಣವನ್ನು ಸಿ.ಹೆಚ್. ಸಾಯಿ ಮಾಡಿದ್ದು, ಅವಿನಾಶ್ ಕೊಲ್ಲಾ ಅವರು ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಇದನ್ನು ಓದಿ:ರೇಣುಕಾ ಸ್ವಾಮಿ ಕೊಲೆ ಕೇಸ್ – ಪ್ರದೂಷ್ ಮಾಫಿ ಸಾಕ್ಷಿಗೆ ಪ್ರಾಸಿಕ್ಯೂಷನ್ ಷರತ್ತುಬದ್ಧ ಒಪ್ಪಿಗೆ; ಆ.10 ಕ್ಕೆ ಕೋರ್ಟ್ ಆದೇಶ



