ವಿಜಯನಗರ/ ದಾವಣಗೆರೆ: ಬಿರುಗಾಳಿ ಸಹಿತ ಭಾರೀ ಮಳೆಗೆ 25ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಹರಪನಹಳ್ಳಿಯ (Harapanahalli) ಶೃಂಗಾರ ಗ್ರಾಮದಲ್ಲಿ ನಡೆದಿದೆ.
ಶನಿವಾರ (ಮೆ.16) ರಾತ್ರಿ ಸುರಿದ ಭಾರೀ ಮಳೆಗೆ ಮನೆಗಳ ತಗಡಿನ ಶೀಟುಗಳು ಹಾಗೂ ಮೇಲ್ಛಾವಣಿ ಕೂಡ ಹಾರಿ ಹೋಗಿವೆ. ಮನೆಗಳ ಪಕ್ಕದಲ್ಲಿದ್ದ ಮರದ ರೆಂಬೆ ಕೊಂಬೆಗಳು ಮನೆ ಮೇಲ್ಛಾವಣಿ ಮೇಲೆ ಬಿದ್ದು ಹಾನಿಯುಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಗಾಳಿ ಮಳೆಗೆ ಜನರು ತತ್ತರಿಸಿದ್ದಾರೆ. ಇದನ್ನೂ ಓದಿ: ಭದ್ರಾ ಡ್ಯಾಂನಿಂದ ಹಾವೇರಿಗೆ ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ
ಉಚ್ಚಂಗಿ ದುರ್ಗದಲ್ಲಿ ಕೂಡ ಉತ್ತಮ ಮಳೆಯಾಗಿದೆ. ಉಚ್ಚಂಗಿ ಯಲ್ಲಮ್ಮ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನೀರು ಹರಿಯುತ್ತಿದೆ. ಬೇಸಿಗೆಯ ಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ಈ ಮಳೆ ತಂಪೆರೆದಿದೆ. ಇದನ್ನೂ ಓದಿ: ಹೊತ್ತಿ ಉರಿದ ತಿರುವನಂತಪುರಂ To ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್ – ತಪ್ಪಿದ ಭಾರೀ ಅನಾಹುತ

