ಕೈರೋ: ಈಜಿಪ್ಟ್‌ನ ಬಂದರಲ್ಲಿ(Egypt Port) ಅಮೆರಿಕ ಒಡೆತನದ ದ್ರವೀಕೃತ ನೈಸರ್ಗಿಕ ಅನಿಲ (LNG) ಟ್ಯಾಂಕರ್ ಮೇಲೆ ಡ್ರೋನ್ ದಾಳಿ (Drone Strike) ನಡೆದಿದ್ದು ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.
ಡಾಮಿಯೆಟ್ಟಾ (Damietta) ಬಂದರಿನಲ್ಲಿ ಬುಧವಾರ ಅಮೆರಿಕ(USA) ಒಡೆತನದ ಎಲ್‌ಎನ್‌ಜಿ ಟ್ಯಾಂಕರ್ ಒಂದರ ಮೇಲೆ ಡ್ರೋನ್ ದಾಳಿ ನಡೆದಿದೆ. ಬಂದರಿನಲ್ಲಿ ಸರಕುಗಳನ್ನು (ಕಾರ್ಗೋ) ಇಳಿಸುವ ಕಾರ್ಯಾಚರಣೆಯ ಸಮಯದಲ್ಲಿ ಡ್ರೋನ್ ದಾಳಿ ನಡೆದು ಸ್ಫೋಟಗೊಂಡಿದೆ.
ಬಂದರಿನಲ್ಲಿ ಸ್ಪೋಟ ಸಂಭವಿಸಿದ ತಕ್ಷಣ ಸ್ಥಳೀಯ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿದ್ದಾರೆ ಎಂದು ಬಂದರು ಸೇವಾ ಸಂಸ್ಥೆಯಾದ ‘ಇಂಚ್‌ಕೇಪ್’ (Inchcape) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಭಾಗಿಯಾದ ನೌಕೆಗಳನ್ನು ಬಂದರು ಪ್ರದೇಶದಿಂದ ಹೊರಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇತರ ಬರ್ತ್‌ಗಳು ಮತ್ತು ಟರ್ಮಿನಲ್‌ಗಳಲ್ಲಿ ರಾತ್ರಿಯ ಸಮಯದಲ್ಲಿ ಕಾರ್ಯಾಚರಣೆಗಳು ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.
WATCH: Crews working to put out a fire following drones strike on a U.S.-owned floating platform in Egypt. https://t.co/Z01NtZiM5w pic.twitter.com/FLJh2ErTvG
— Open Source Intel (@Osint613) July 29, 2026
ಈ ಟ್ಯಾಂಕರ್ ಅಮೆರಿಕದ ಒಡೆತನದ ಮತ್ತು ನಿರ್ವಹಣೆಯ ತೇಲುವ ಶೇಖರಣಾ ಸೌಲಭ್ಯವಾಗಿದ್ದು (Floating Storage Facility) ಮಾರ್ಷಲ್ ಐಲ್ಯಾಂಡ್ಸ್‌ನ ಧ್ವಜವನ್ನು ಹೊಂದಿತ್ತು.
ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಮಧ್ಯಪ್ರಾಚ್ಯವು ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ದಿನವೇ ಈ ಘಟನೆ ನಡೆದಿದೆ. ಬುಧವಾರ ಎರಡೂ ಕಡೆಯವರು ತಾತ್ಕಾಲಿಕ ಕದನ ವಿರಾಮ ಕೈಬಿಟ್ಟಿದ್ದರಿಂದ ಯುಎಸ್-ಇರಾನ್ ಸಂಘರ್ಷವು ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದನ್ನೂ ಓದಿ: 100 ಮೀಟರ್ ಆಳದಲ್ಲಿರುವ ಇರಾನ್‌ನ ರಹಸ್ಯ ಅಣು ತಾಣ – ಟ್ರಂಪ್ ದಾಳಿ ಬೆದರಿಕೆ ಹಾಕಿದ ‘ಪಿಕ್‌ಆಕ್ಸ್ ಪರ್ವತ’ದ ಒಳಕಥೆ
ಯುಎಸ್ ಸೆಂಟ್ರಲ್ ಕಮಾಂಡ್ (US Central Command) ಹೇಳಿಕೆ ನೀಡಿ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದ ಸಶಸ್ತ್ರ ಗುಂಪುಗಳಿಗೆ ಸಂಬಂಧಿಸಿದ ಲಾಜಿಸ್ಟಿಕ್ಸ್ ಕೇಂದ್ರಗಳು, ಶಸ್ತ್ರಾಸ್ತ್ರ ಉಗ್ರಾಣಗಳು ಮತ್ತು ಕಾರ್ಯಾಚರಣೆಯ ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ. ಯುಎಸ್ ಪಡೆಗಳು ಮತ್ತು ಸೌದಿ ಇಂಧನ ಮೂಲಸೌಕರ್ಯಗಳ ಮೇಲೆ ಇತ್ತೀಚೆಗೆ ನಡೆದ ಡ್ರೋನ್ ದಾಳಿಯ ಯತ್ನಗಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾಷಿಂಗ್ಟನ್ ಹೇಳಿದೆ. ಆದಾಗ್ಯೂ, ಇರಾಕಿ ಅಧಿಕಾರಿಗಳು ಈ ದಾಳಿಯನ್ನು ತಮ್ಮ ದೇಶದ ಸಾರ್ವಭೌಮತ್ವದ ಉಲ್ಲಂಘನೆ ಎಂದು ಖಂಡಿಸಿದ್ದಾರೆ.
