ಕೊಪ್ಪಳ/ಬೀದರ್: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಅಬ್ಬರ ಜೋರಾಗಿದ್ದು, ಸಿಡಿಲು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.
ಬೀದರ್ (Bidar) ಜಿಲ್ಲೆಯ ಹುಮ್ನಾಬಾದ್, ಚಿಟ್ಟಗುಪ್ಪ, ಬಸವಕಲ್ಯಾಣ, ಔರಾದ್ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಕಂಗಲಾಗಿದ್ದ ಜನರಿಗೆ ಮಳೆರಾಯ ತಂಪೆರದಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದ್ದು, ಸಿಡಲು, ಬಿರುಗಾಳಿ ಸಹಿತ ವರುಣ ಅಬ್ಬರಿಸಿದ್ದಾನೆ. ಸದ್ಯ ಜಿಲ್ಲೆಯ ಜನರು ಖುಷ್ ಆಗಿದ್ದು, ತಂಪಾದ ವಾತಾವರಣವನ್ನು ಆನಂದಿಸುತ್ತಿದ್ದಾರೆ. ಇದನ್ನೂ ಓದಿ: ತೈಲ ದರ ಮತ್ತೆ ಏರಿಕೆಗೆ ವಿಪಕ್ಷಗಳ ಆಕ್ರೋಶ – `ಮೋದಿ ಹಣದುಬ್ಬರ ಮನುಷ್ಯ’ ಅಂತ ಕಾಂಗ್ರೆಸ್ ಕಿಡಿ
ಇನ್ನೂ ಕೊಪ್ಪಳದಲ್ಲಿಯೂ (Koppal) ಜೋರಾಗಿ ಮಳೆ ಸುರಿದಿದ್ದು, ಕಾರಟಗಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.
