ಹಾವೇರಿ: ಶಾಲೆಗೆ ತೆರಳುತ್ತಿದ್ದ ವೇಳೆ ಬೈಕ್ ಮೇಲಿಂದ ಬಿದ್ದು ಶಿಕ್ಷಕಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಗಂಗಾಜಲ ತಾಂಡಾದ ಬಳಿ ನಡೆದಿದೆ.
ಈ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಮೃತ ಶಿಕ್ಷಕಿಯನ್ನು ಲೀಲಾವತಿ ಕಟಿಗೇರ (33) ಎಂದು ಗುರುತಿಸಲಾಗಿದೆ. ಇವರು ಮೆಡ್ಲೇರಿ ಗ್ರಾಮದಲ್ಲಿರು ಬೀರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
Advertisement
Advertisement
ಇಂದು ಬೆಳಗ್ಗೆ ಲೀಲಾವತಿ ಅವರು ತಮ್ಮ ಗಂಡ ಬಸವರಾಜು ಜೊತೆ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಶಾಲೆಗೆ ತಡವಾಗಿತ್ತು ಎಂದು ವೇಗವಾಗಿ ಹೋಗುತ್ತಿದ್ದಾಗ ಬೈಕ್ ರಸ್ತೆಯಲ್ಲಿದ್ದ ಉಬ್ಬನ್ನು ಜಂಪ್ ಮಾಡಿದೆ. ಈ ವೇಳೆ ಬ್ಯಾಲೆನ್ಸ್ ತಪ್ಪಿದ ಲೀಲಾವತಿಯವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾದ ಕಾರಣ ಸಾವನ್ನಪ್ಪಿದ್ದಾರೆ.
Advertisement
ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಣೇಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.