DharwadDistrictsKarnatakaLatestLeading NewsMain Post

ಶಾಸಕ ಬೆಲ್ಲದ್‌ ಹೆಸರಿನಲ್ಲಿ ಡೆತ್‌ನೋಟ್‌ ಬರೆದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಧಾರವಾಡ: ಶಾಸಕ ಅರವಿಂದ ಬೆಲ್ಲದ್‌(Arvind Bellad) ಹೆಸರಲ್ಲಿ ಡೆತನೋಟ್(Death Note) ಬರೆದು ಮಹಿಳೆಯೋರ್ವಳು ಆತ್ಮಹತ್ಯೆಗೆ(Suicide) ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಶಕುಂತಲಾ ಮನಸೂರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆಗೆಗಾಗಿ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ.

ಕಳೆದ 20 ವರ್ಷಗಳಿಂದ ಶಕುಂತಲಾ ಕರ್ನಾಟಕ ಮಹರ್ಷಿ ವಾಲ್ಮಿಕಿ ಪಂಗಡದಲ್ಲಿ ಕಿರಿಯ ಸಹಾಯಕಿಯಾಗಿ ಕೆಲಸ ಮಾಡುತಿದ್ದಳು. ಅಧಿಕಾರಿ ರವಿ ಬೆಂತೂರ ನಿರ್ದೇಶಕರಾಗಿ ಬಂದ ಮೇಲೆ ಈಕೆಯ ಮೇಲೆ ಲಂಚ‌(Corruption) ಪಡೆದ ಆರೋಪ ಮಾಡಿ ನಾಲ್ಕು ತಿಂಗಳ‌ ಹಿಂದೆ ಕೆಲಸದಿಂದ ತೆಗೆದಿದ್ದರು. ಇದನ್ನೂ ಓದಿ: ನನ್ನ ಭಾಗವಹಿಸುವಿಕೆ ಬಯಸಿದ್ರೆ ರಾಜಕೀಯಕ್ಕೆ ಬರುವೆ – ಕಂಗನಾ ಬಿಗ್ ಸ್ಟೇಟ್‌ಮೆಂಟ್

ಶನಿವಾರ ಸಚಿವ ಶ್ರೀರಾಮುಲು ಧಾರವಾಡಕ್ಕೆ ಬಂದಾಗ ಮನವಿ ಕೊಡಲು ಶಕುಂತಲಾ ಬಂದಿದ್ದಳು. ಶ್ರೀರಾಮುಲು ಸಿಗದೇ ಇದ್ದಾಗ ಧಾರವಾಡ ಶಾಸಕ ಅರವಿಂದ ಬೆಲ್ಲದ್‌ ಬಳಿ ಮನವಿ ಕೊಡಲು ಹೋಗಿದ್ದಳು.

ಈ ವೇಳೆ ಶಾಸಕರು ನನಗೆ ಅಪಮಾನ ಮಾಡಿದ್ದಾರೆ. ಲಂಚ ಪಡೆದಿದ್ದೆನೆ ಎಂದು ಶಾಸಕರೇ ನನ್ನನ್ನು ಕೆಲಸದಿಂದ ತೆಗೆಸಿದ್ದಾರೆ ಎಂದು ಆರೋಪ ಮಾಡಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ. ಜನರು ಇದ್ದಾಗ ಲಂಚ‌ ತೆಗೆದುಕೊಂಡಿದ್ದಿಯಾ ಎಂದು ಶಾಸಕರು ನನಗೆ ಅಪಮಾನ ಮಾಡಿದ್ದಾರೆ. ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂದು ದೂರಿದ್ದಾಳೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಆರೋಗ್ಯ ಸ್ವಲ್ಪ ಚೇತರಿಕೆ ಕಂಡಿದ್ದು ಚಿಕಿತ್ಸೆ ಮುಂದುವರೆದಿದೆ.

Live Tv

Leave a Reply

Your email address will not be published. Required fields are marked *

Back to top button