ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿರುವ ಹನುಮಾನ್ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ (OTT) ಸ್ಟ್ರೀಮಿಂಗ್ ಆಗುವ ಕುರಿತಂತೆ ಸುದ್ದಿಯೊಂದು ಬಂದಿತ್ತು. ಒಪ್ಪಂದ ಪ್ರಕಾರ ಸಿನಿಮಾ ರಿಲೀಸ್ ಆಗಿ ಮೂರೇ ಮೂರು ವಾರದಲ್ಲಿ ಚಿತ್ರ ಒಟಿಟಿಯಲ್ಲಿ ಬರಬೇಕಿತ್ತು. ಸಿನಿಮಾ ಇನ್ನೂ ಥಿಯೇಟರ್ ನಲ್ಲಿ ಇರುವ ಕಾರಣದಿಂದಾಗಿ 55 ದಿನಗಳ ನಂತರ ಚಿತ್ರವನ್ನು ಒಟಿಟಿಯಲ್ಲಿ ತರಲು ನಿರ್ಧರಿಸಲಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 2ರಿಂದ ಝೀ 5ನಲ್ಲಿ ಚಿತ್ರ ಬರಬೇಕಿತ್ತು. ಅದು ಆಗಲಿಲ್ಲ.
Advertisement
ಮಾರ್ಚ್ 2ನೇ ತಾರೀಖು ಒಟಿಟಿಯಲ್ಲಿ ಹನುಮಾನ್ ಸಿಗಲಿಲ್ಲ. ಹಾಗಾಗಿ ಮತ್ತೊಂದು ದಿನಾಂಕವನ್ನು ಘೋಷಣೆ ಮಾಡಲಾಯಿತು. ಅದರಂತೆ ಮಾರ್ಚ್ 16ಕ್ಕೆ ಒಟಿಟಿಗೆ ಹನುಮಾನ್ ಬರಬೇಕಿತ್ತು. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ನಾಳೆಯೂ ಸಿನಿಮಾ ಒಟಿಟಿಯಲ್ಲಿ ಲಭ್ಯವಿರುವುದಿಲ್ಲ. ಅದಕ್ಕಾಗಿ ಕಾರಣವನ್ನೂ ನೀಡಿದ್ದಾರೆ ನಿರ್ದೇಶಕರು. ತಾಂತ್ರಿಕ ಕಾರಣದಿಂದಾಗಿ ನಾಳೆ ಒಟಿಟಿಯಲ್ಲಿ ಹನುಮಾನ್ ಲಭ್ಯವಿಲ್ಲವಂತೆ.
Advertisement
Advertisement
ಪ್ರಶಾಂತ್ ವರ್ಮಾ (Prashant Verma) ನಿರ್ದೇಶನದಲ್ಲಿ ಮೂಡಿ ಬಂದಿರುವ ಹನುಮಾನ್ (Hanuman) ಚಿತ್ರ ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ರಿಲೀಸ್ ಆದ 14 ದಿನಕ್ಕೆ 250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾ ತನ್ನ ನಾಗಲೋಟವನ್ನು ಮುಂದುವರೆಸಿದೆ. ಈ ನಡುವೆ ಪಾರ್ಟ್ 2 ಮಾಡುವ ಕುರಿತೂ ಸುದ್ದಿ ಹರಿದಾಡುತ್ತಿದೆ.
Advertisement
ಕೆಜಿಎಫ್, ಕೆಜಿಎಫ್ 2 (KGF 2) ಚಿತ್ರದ ಸಕ್ಸಸ್ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಬಗ್ಗೆ ಸದಾ ಒಂದಲ್ಲಾ ಒಂದು ವಿಚಾರವಾಗಿ ಚಾಲ್ತಿಯಲ್ಲಿರುತ್ತಾರೆ. ಸುದ್ದಿಗೋಷ್ಠಿಯೊಂದರಲ್ಲಿ ಶಾರುಖ್ ಖಾನ್, ಕರೀನಾ ಕಪೂರ್ ‘ಟಾಕ್ಸಿಕ್’ ಚಿತ್ರಕ್ಕೆ ಎಂಟ್ರಿ ಕೊಡ್ತಾರಾ ಎಂಬ ವಿಚಾರಕ್ಕೆ ಯಶ್ ಸ್ಪಷ್ಟನೆ ನೀಡಿದ್ದರು. ಅದರಂತೆ ‘ಹನುಮಾನ್’ 2ನಲ್ಲಿ ರಾಕಿಬಾಯ್ ನಟಿಸ್ತಾರಾ ಎಂಬ ವಿಚಾರಕ್ಕೆ ಸ್ವತಃ ಯಶ್ ಕ್ಲ್ಯಾರಿಟಿ ಕೊಟ್ಟಿದ್ದಾರೆ.
‘ಹನುಮಾನ್’ ಪಾರ್ಟ್ 2ನಲ್ಲಿ ನಾನು ನಟಿಸುತ್ತಿಲ್ಲ. ಈಗ ‘ಟಾಕ್ಸಿಕ್’ (Toxic) ಸಿನಿಮಾ ಬಿಟ್ಟು ಬೇರೆ ಕಡೆ ಯೋಚನೆ ಮಾಡುತ್ತಿಲ್ಲ. ಪರಭಾಷೆಯಿಂದ ಸಾಕಷ್ಟು ಸಿನಿಮಾಗಳು ನನ್ನನ್ನು ಅರಸಿ ಬಂದಿರೋದು ನಿಜ. ಆದರೆ ಯಾವ ಚಿತ್ರಕ್ಕೂ ನಾನು ಸಹಿ ಹಾಕಿಲ್ಲ ಎಂದು ಯಶ್ ಉತ್ತರಿಸಿದ್ದಾರೆ. ಅಲ್ಲಿಗೆ ಹನುಮಾನ್ 2ನಲ್ಲಿ ಯಶ್ ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ತೇಜ ಸಜ್ಜ ನಟಿಸಿರುವ ‘ಹನುಮಾನ್’ (Hanuman) ಸಿನಿಮಾ ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ಪಾರ್ಟ್ 2 ಮಾಡಲು ತೆರೆಮರೆಯಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಹೀಗಿರುವಾಗ ಪ್ರದೀಪ್ ವರ್ಮಾ ಅವರ ನಿರ್ದೇಶನದಲ್ಲಿ ‘ಹನುಮಾನ್ ಪಾರ್ಟ್ 2’ ಮೂಡಿ ಬರಲಿದ್ದು, ಯಶ್ ಲೀಡ್ ರೋಲ್‌ನಲ್ಲಿ ನಟಿಸುತ್ತಾರೆ ಎಂದೇ ಸುದ್ದಿಯಾಗಿತ್ತು. ಅದಕ್ಕೆ ರಾಕಿಭಾಯ್ ಈಗ ಉತ್ತರ ನೀಡಿದ್ದಾರೆ.