ಬಿಗ್‌ಬಾಸ್‌ನಲ್ಲಿ(Bigg Boss) ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದ ಜೋಡಿ ಅಂದ್ರೆ ಅದು ಗಿಲ್ಲಿ(Gilli Nata) ಹಾಗೂ ಕಾವ್ಯ(Bigg Boss kavya Shaiva) ಪೇರ್. ಬಿಗ್‌ಬಾಸ್‌ನಿಂದ ಹೊರಬಂದ ಮೇಲೂ ಇವರ ಕ್ರೇಜ್ ಕಮ್ಮಿಯಾಗಿರಲಿಲ್ಲ. ಈಗಾಗಲೇ ಗಿಲ್ಲಿ ನಟ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರಕ್ಕೆ ಮುಹೂರ್ತವೂ ನಡೆದಿದ್ದು, ಅದಕ್ಕೆ ‘ಪಳಾರ್’ (Palar) ಎಂದು ಶೀರ್ಷಿಕೆ ಇಡಲಾಗಿದೆ.
ಈ ಚಿತ್ರಕ್ಕೆ ಕಾವ್ಯ ಶೈವ ನಾಯಕಿ ಎಂಬ ಅನುಮಾನ ಕೇಳಿಬಂದಿತ್ತು. ನಾಯಕಿಯ ಕುರಿತಾಗಿ ಚಿತ್ರತಂಡ ಜೋಕ್ ವಿಡಿಯೋವನ್ನೂ ರಿವೀಲ್ ಮಾಡಿತ್ತು. ಇದೀಗ ಕಾವ್ಯ ಶೈವ ಫ್ಯಾನ್ಸ್ ಪೇಜ್‌ನಲ್ಲಿ ಹೊಸ ಪೋಸ್ಟ್ ಭಾರೀ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.
‘ಪಳಾರ್’ ಹೀರೋಯಿನ್ ಕಮಿಂಗ್ ಸೂನ್ ಎಂದು ಪೋಸ್ಟ್ ಹಾಕಲಾಗಿದ್ದು, ಇದು ಕಾವ್ಯ ಅವರ ಅಧಿಕೃತ ಪೇಜ್ ಅಲ್ಲ ಎಂಬುದು ತಿಳಿಯದೆ, ಕಾವ್ಯ ಅವರೇ ‘ಪಳಾರ್’ ಚಿತ್ರಕ್ಕೆ ನಾಯಕಿ ಎಂಬ ಸುದ್ದಿ ವೈರಲ್ ಆಗುತ್ತಿದೆ. ಫ್ಯಾನ್ಸ್ ಪೇಜ್‌ನಲ್ಲಿ ನಾಯಕಿಯ ಮುಖ ತೋರಿಸದೆ ರಹಸ್ಯ ಕಾಪಾಡಿಕೊಂಡಿದ್ದಾರೆ. ‘ಆದಷ್ಟು ಬೇಗ’ ಎಂಬ ಬರಹದೊಂದಿಗೆ, ‘ನೀವು ಕಾಯ್ತಿರೋ ಹೀರೋಯಿನ್ ಆದಷ್ಟು ಬೇಗ ಬರ್ತಾರೆ’ ಎಂದು ಉಲ್ಲೇಖಿಸಲಾಗಿದೆ. ಇದೇ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: `ಟಾಕ್ಸಿಕ್’ ಲೇಡಿಸ್ ಗ್ಯಾಂಗ್ ಬರ್ತಿದೆ ದಾರಿ ಬಿಡಿ
ಅಂದಹಾಗೆ, ಹೀರೋಯಿನ್ ಕುರಿತು ಕಾವ್ಯ ಅವರ ಅಧಿಕೃತ ಪೇಜ್, ಗಿಲ್ಲಿ ಅಥವಾ ಪ್ರೊಡಕ್ಷನ್ ಹೌಸ್‌ನಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.
ಗಿಲ್ಲಿ ಅವರ ಚೊಚ್ಚಲ ಚಿತ್ರಕ್ಕೆ ಕಾವ್ಯ ನಾಯಕಿ ಎಂದೇ ಜೋರಾಗಿ ಸುದ್ದಿ ಕೇಳಿಬರುತ್ತಿದೆ. ಸಿನಿಮಾ ಸೆಟ್ಟೇರುವುದಕ್ಕೂ ಮುನ್ನವೇ ಫೋಟೋಶೂಟ್ ಕೂಡ ನಡೆದಿದೆ ಎಂಬ ಮಾಹಿತಿ ಇದೆ. ಆದರೆ ಇನ್ನೂ ಚಿತ್ರತಂಡದಿಂದ ಅಧಿಕೃತ ಘೋಷಣೆ ನಡೆದಿಲ್ಲ.
ಇದರ ನಡುವೆ, ಕಾವ್ಯ ಅವರ ಇನ್‌ಸ್ಟಾಗ್ರಾಂ ಫ್ಯಾನ್ಸ್ ಪೇಜ್‌ನಲ್ಲಿ ಹೊಚ್ಚ ಹೊಸ ಪೋಸ್ಟರ್ ಸದ್ದು ಮಾಡುತ್ತಿದೆ. ಇದು ಎಐ ಇಮೇಜ್ ಎಂಬ ಅನುಮಾನವೂ ಶುರುವಾಗಿದೆ. ಆದರೂ ಇದೇ ನಿಜ ಎಂದು ನಂಬಿರುವ ಗಿಲ್ಲಿ ಫ್ಯಾನ್ಸ್ ಕಾಮೆಂಟ್ ಸೆಕ್ಷನ್‌ನಲ್ಲಿ ಥರ ಥರವಾಗಿ ಪ್ರತಿಕ್ರಿಯೆ ನೀಡಿ, “ನಮ್ಮ ಊಹೆಯೇ ಸರಿ ಆಗಿದೆ” ಎಂದು ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಇದು ಒಂದು ಪ್ರಚಾರದ ಸ್ಟ್ರಾಟೆಜಿಯಾ ಅಥವಾ ಕಾವ್ಯ ಶೈವ ಅವರೇ ಗಿಲ್ಲಿ ಚಿತ್ರಕ್ಕೆ ಹೀರೋಯಿನ್ನಾ ಎಂಬ ಪ್ರಶ್ನೆಗೆ ಉತ್ತರ ಸಿಗಲು ಇನ್ನೂ ಸ್ವಲ್ಪ ದಿನ ಕಾಯಲೇಬೇಕಾಗಿದೆ.ಇದನ್ನೂ ಓದಿ: ‘ಇಷ್ಟ ದೇವತೆ’ ಧಾರವಾಹಿಯಲ್ಲಿ ನಟಿಸಿದ್ದ ಸಾಯಿ ಸುರಭಿ
