ಚಿಕ್ಕಬಳ್ಳಾಪುರದ ನಂದಿಗಿರಿಧಾಮದ ಬಳಿಯ ಹೋಮ್ ಸ್ಟೇವೊಂದರಲ್ಲಿ ಬೆಡ್ ಮೇಲೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸಾಯಿ ಸುರಭಿ, ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದವರು. ಅದಕ್ಕೂ ಮೊದಲು ಸಾಯಿ ಸುರಭಿಗೆ ಕಿರುತೆರೆ ಮತ್ತು ಮಾಡೆಲಿಂಗ್ ಜಗತ್ತಿನ ಜೊತೆ ನಂಟಿರೋದು ಇದೀಗ ಬಯಲಾಗಿದೆ.
2019ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, `ಇಷ್ಟ ದೇವತೆ’ ಧಾರಾವಾಹಿಯಲ್ಲಿ ಸುರಭಿ, ಧಾರಾವಾಹಿಯ ಕಥಾ ನಾಯಕನ ಅತ್ತೆ ಮಗಳು ಪಾತ್ರವನ್ನು ನಿರ್ವಹಿಸುತ್ತಿದ್ದರು.

ಈ ಧಾರಾವಾಹಿಯನ್ನು ರಂಜನಿ ರಾಘವನ್ ನಿರ್ದೇಶನ ಮಾಡುತ್ತಿದ್ದರು. ‘ಇಷ್ಟದೇವತೆ’ ಸೀರಿಯಲ್‌ನಲ್ಲಿ ಸಾಯಿ ಸುರಭಿ ಕೆಲವು ಎಪಿಸೋಡ್‌ಗಳಲ್ಲಿ ನಟಿಸಿದ್ದರು. ಬಣ್ಣದ ಜಗತ್ತಿನ ಕನಸು ಕಂಡಿದ್ದ ಸಾಯಿ ಸುರಭಿಗೆ ಬಣ್ಣದ ಲೋಕ ಕೈ ಹಿಡಿಯಲಿಲ್ಲ.
ಹಿಂದೊಮ್ಮೆ ಕಲರ್ಸ್ ವಾಹಿನಿಯ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿಗಳಲ್ಲಿ ಒಂದಾದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಸಾಯಿ ಸುರಭಿ ತನ್ನ ಸೀರಿಯಲ್ ತಂಡದ ಜೊತೆ ಭಾಗಿಯಾಗಿದ್ದರು. ಸಾಯಿ ಸುರಭಿ ಕೇವಲ ಕಿರುತೆರೆಯ ನಟಿಯಾಗಿರಲಿಲ್ಲ. ಮಾಡೆಲಿಂಗ್ ಜಗತ್ತಿನಲ್ಲೂ ಗುರುತಿಸಿಕೊಂಡಿದ್ದರು. ಹಲವಾರು ವೇದಿಕೆಗಳಲ್ಲಿ ಅವರು ರ‍್ಯಾಂಪ್‌ವಾಕ್ ಮಾಡಿದ್ದಾರೆ. ಬಳಿಕ ಫಿಸಿಯೋಥೆರಪಿಸ್ಟ್ ವೃತ್ತಿ ನಿರ್ವಹಿಸಿಸುತ್ತಿದ್ದರು. ಇದೀಗ ಅನುಮಾನಾಸ್ಪದವಾಗಿ ಸತ್ತಿದ್ದಾರೆ.

