`ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ಇದೀಗ ಪ್ರಚಾರ ಗರಿಗೆದರಿದೆ. ಎರಡು ಬಾರಿ ರಿಲೀಸ್ ಡೇಟ್ ಅನೌನ್ಸ್ ಆಗಿ, ಇದೀಗ ಫೈನಲ್ ಡೇಟ್‌ಗೆ ಫಿಕ್ಸಾಗಿರೋ ಟಾಕ್ಸಿಕ್ ಟೀಮ್ ಈಗಾಗ್ಲೇ ಕೆಲ ತುಣುಕುಗಳನ್ನ ರಿಲೀಸ್ ಮಾಡಿ ಪ್ರಚಾರದ ಹಾದಿಯಲ್ಲೇ ಇದೆ. ಇನ್ನೇನು ಎಂದು ಪ್ರಶ್ನೆ ಎದ್ದಿರುವಾಗಲೇ ಟಾಕ್ಸಿಕ್ ಟೀಮ್ ಗ್ಲ್ಯಾಮರ್ ಮಳೆ ಸುರಿಸಲು ಸಿದ್ಧವಾಗಿರುವಂತಿದೆ. ಕಾರಣ ಟಾಕ್ಸಿಕ್ ಲೇಡಿಸ್‌ಗಳನ್ನ ಅಖಾಡಕ್ಕಿಳಿಸಲು ವೇದಿಕೆ ಸಜ್ಜಾಗಿದೆ. ಜುಲೈ 1 ರಿಂದ ಟಾಕ್ಸಿಕ್ ಲೇಡಿಸ್‌ಗಳದ್ದೇ ದರ್ಬಾರ್.
ಅಂದಹಾಗೆ ಟಾಕ್ಸಿಕ್ ಚಿತ್ರದಲ್ಲಿ ಐವರು ನಟಿಯರಿದ್ದಾರೆ. ಅವರವರ ಪಾತ್ರದ ಹೆಸರಿನೊಂದಿಗೆ ಫಸ್ಟ್‌ಲುಕ್‌ನ್ನು ಈಗಾಗ್ಲೇ ಟೀಮ್ ರಿಲೀಸ್ ಮಾಡಿ ಆಗಿದೆ. ಇನ್ನೇನು ಎಂಬ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ. ಐವರು ನಟಿಯರ ಪಾತ್ರದ ಪರಿಚಯದ ಟೀಸರ್ ರಿಲೀಸ್ ಮಾಡುವ ಸಾಧ್ಯತೆ ಇದೆ. ಈಗಾಗ್ಲೇ ಯಶ್ ದ್ವಿಪಾತ್ರದಲ್ಲಿ ಕಾಣಿಸ್ಕೊಂಡಿರೋ ಟೀಸರ್, ಪೋಸ್ಟರ್ ಬಿಡುಗಡೆ ಆಗಿದ್ದವು. ರಾಯ ಹಾಗೂ ಟಿಕೆಟ್ ಹೆಸರಿನ ತಂದೆ, ಮಗನ ಪಾತ್ರದಲ್ಲಿ ಯಶ್ (Yash) ನಟಿಸುತ್ತಿದ್ದಾರೆ. ಐವರು ನಟಿಯರದ್ದು ಯಾವ್ಯಾವ ಪಾತ್ರ ಅನ್ನೋ ಕುತೂಹಲ ತಣಿಸಲು ಜುಲೈ 1 ರಿಂದ ಟಾಕ್ಸಿಕ್ ಟೀಮ್ ಸಜ್ಜಾಗಿದೆ. ಹೀಗಾಗಿ, ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಂನಲ್ಲಿ ʼಕಾಮ್ ಡೌನ್.. ಲೇಡಿಸ್ ಟೇಕ್ ಟೈಂ ಟು ಕಮ್ʼ ಎಂದು ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಮಹಾನ್ ಚಿತ್ರದಲ್ಲಿ ಶಿವಣ್ಣ ಲಾಯರ್
ಟಾಕ್ಸಿಕ್‌ನಲ್ಲಿ ಬಹುಭಾಷಾ ಖ್ಯಾತ ತಾರೆಯರ ದಂಡೇ ಇದ್ದು, ಕನ್ನಡದಿಂದ ರುಕ್ಮಿಣಿ ವಸಂತ್ ಮೆಲ್ಲಿಸಾ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಕಿಯಾರಾ ಅಡ್ವಾನಿ ನಾಡಿಯಾ ಕ್ಯಾರೆಕ್ಟರ್‌ಗೆ ಬಣ್ಣ ಹಚ್ಚಿದರೆ, ನಯನತಾರಾ ಗಂಗಾ ಪಾತ್ರಕ್ಕಾಗಿ ಅಭಿನಯಿಸಿದ್ದಾರೆ. ಇನ್ನು ಹುಮಾ ಖುರೇಶಿ ಎಲಿಜೆಬೆತ್ ಪಾತ್ರಕ್ಕಾಗಿ ನಟಿಸಿದ್ದರೆ, ಇನ್ನೋರ್ವ ನಟಿ ತಾರಾ ಸುತಾರಿಯಾ ರೆಬೆಕಾ ಹೆಸರಿನ ಪಾತ್ರಕ್ಕಾಗಿ ನಟನೆ ಮಾಡಿದ್ದಾರೆ. ಈಗಾಗ್ಲೇ ರಿಲೀಸ್ ಆಗಿದ್ದ ಪೋಸ್ಟರ್‌ನಲ್ಲಿ ಈ ಐವರು ನಟಿಯರ ಲುಕ್ ಅತ್ಯಂತ ಕುತೂಹಲ ರೋಚಕತೆ ಕ್ರಿಯೇಟ್ ಮಾಡಿತ್ತು. ಇದೀಗ ಜುಲೈ 1 ರಿಂದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಆದಲ್ಲಿ ಒಬ್ರಾದ್ಮೇಲೆ ಒಬ್ಬರು ಎಂಟ್ರಿ ಕೊಡೋ ಟಾಕ್ಸಿಕ್ ಲೇಡಿಸ್ ಸೋಶಿಯಲ್ ಮೀಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡುವ ಸೂಚನೆ ಇದೆ.
