ಇಸ್ಲಾಮಾಬಾದ್: ಟ್ಯೂಷನ್ ಸೆಂಟರ್‌ನ (Coaching Centre) ಮೇಲ್ಛಾವಣಿ ಕುಸಿದು (Roof Collapse) ಕನಿಷ್ಠ 14 ಮಕ್ಕಳು ಮೃತಪಟ್ಟಿದ್ದು, ಐವರು ಮಕ್ಕಳು ಹಾಗೂ ಒಬ್ಬ ಶಿಕ್ಷಕರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ (Pakistan) ಲಾಹೋರ್ (Lahore) ನಗರದಲ್ಲಿ ಮಂಗಳವಾರ ನಡೆದಿದೆ.
ಲಾಹೋರ್‌ನ ದಕ್ಷಿಣ ಭಾಗದ ಬಸ್ತಿ ಈದ್ ಗಾಹ್, ಕಹ್ನಾ ನೌ ಪ್ರದೇಶದಲ್ಲಿರುವ ಟ್ಯೂಷನ್ ಕೇಂದ್ರದಲ್ಲಿ ಈ ಅವಘಡ ಸಂಭವಿಸಿದೆ. ಕಟ್ಟಡದ ಮೇಲ್ಛಾವಣಿ ಏಕಾಏಕಿ ಕುಸಿದ ಪರಿಣಾಮ ಒಳಗಿದ್ದ ಮಕ್ಕಳು ಅವಶೇಷಗಳಡಿ ಸಿಲುಕಿದ್ದಾರೆ. ಮಾಹಿತಿ ಪಡೆದ ತಕ್ಷಣ ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಹೊರತೆಗೆದರು. ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಡೆಡ್ಲಿ ಆಕ್ಸಿಡೆಂಟ್ ಜಂಕ್ಷನ್; ಒಂದೇ ಜಾಗದಲ್ಲಿ 6 ಬಾರಿ ಅಪಘಾತ
ಮೃತ ಮಕ್ಕಳ ವಯಸ್ಸು ಸುಮಾರು 4 ರಿಂದ 12 ವರ್ಷಗಳ ನಡುವೆ ಇದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾಹೋರ್ ಆಯುಕ್ತೆ ಮರಿಯಂ ಖಾನ್ ಮೃತರ ಸಂಖ್ಯೆಯನ್ನು ದೃಢಪಡಿಸಿದ್ದು, ಘಟನೆ ಕುರಿತು ತಕ್ಷಣ ಮತ್ತು ಪಾರದರ್ಶಕ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಕೇವಲ ಒಂದು ಪ್ರಯೋಗ, ಮುಂದಿನ ವರ್ಷದೊಳಗೆ ಫಲಿತಾಂಶ: ಕೇಂದ್ರ ಸರ್ಕಾರ
ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳು ಮಕ್ಕಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪೊಲೀಸರು ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುತ್ತಿದ್ದು, ಕಟ್ಟಡ ಕುಸಿತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಇದನ್ನೂ ಓದಿ: Twisha Sharma Case: ತ್ವಿಷಾ ಶರ್ಮಾ ಅತ್ತೆ ಮನೆಯಲ್ಲಿ ಕಳ್ಳತನ; ಸಾಕ್ಷ್ಯ ನಾಶಕ್ಕೆ ಯತ್ನವೇ ಎಂಬ ಅನುಮಾನ
