DharwadDistrictsKarnatakaLatestMain Post

ಸಂವಿಧಾನದ ಬಗ್ಗೆ ಮಾತನಾಡುವ ನೀವೇ ಈ ರೀತಿ ಹೇಳಿರುವುದು ಸರಿಯಲ್ಲ : ಸಿದ್ದರಾಮಯ್ಯಗೆ ಹಾಲಪ್ಪ ಆಚಾರ್ ತಿರುಗೇಟು

ಧಾರವಾಡ: ಸಂವಿಧಾನದ ಬಗ್ಗೆ ಅದ್ಭುತವಾಗಿ ಮಾತನಾಡುವ ಸಿದ್ದರಾಮಯ್ಯನವರೇ ಈ ರೀತಿ ಹೇಳಿಕೆ ನೀಡಬಾರದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿರುವ ಅವರು, ಸಂವಿಧಾನದ ಬಗ್ಗೆ ಅದ್ಭುತವಾಗಿ ಮಾತನಾಡುವ ಸಿದ್ದರಾಮಯ್ಯನವರೇ ಈ ರೀತಿ ಹೇಳಿಕೆ ನೀಡಬಾರದು. ಮಠಾಧೀಶರದ್ದೂ ಒಂದು ಡ್ರೇಸ್ ಕೋಡ್ ಇದೆ. ಅದು ಅವರ ಸಂಪ್ರದಾಯ. ಆ ಸಂಪ್ರದಾಯವನ್ನು ಹಿಜಬ್‍ಗೆ ಹೋಲಿಕೆ ಮಾಡುವುದು ಎಷ್ಟು ಸರಿ? ಎಂದು ವಾಗ್ದಾಳಿ ನಡೆಸಿದರು.

SIDDARAMAIAH

ಸಿದ್ದರಾಮಯ್ಯ ಅವರು ಯಾವ ಅರ್ಥದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಶಾಲೆಯಲ್ಲಿ ಬೇಧ, ಭಾವ ಇರಬಾರದು. ಎಲ್ಲರೂ ಸಮನಾಗಿರಲಿ ಎಂದು ಸಮವಸ್ತ್ರ ಪದ್ಧತಿ ಮಾಡಲಾಗಿದೆ. ಇದರ ಉದ್ದೇಶ ಅರ್ಥವಾಗದೇ ರಾಜಕೀಯವಾಗಿ ಈ ರೀತಿ ಮಾತನಾಡಬಾರದು. ಎಲ್ಲವನ್ನೂ ಅಳೆದು ತೂಗಿ ನ್ಯಾಯಾಲಯ ತೀರ್ಪು ಕೊಟ್ಟಿದೆ. ನ್ಯಾಯಾಲಯದ ತೀರ್ಪನ್ನು ಗೌರವಿಸುವುದಿಲ್ಲ ಅಂದರೆ ಹೇಗೆ? ಎಂದು ಕಿಡಿಕಾರಿದರು. ಇದನ್ನೂ ಓದಿ: ದೆಹಲಿಯಿಂದ ಕರೆ ಬರುವ ನಿರೀಕ್ಷೆಯಿದೆ: ಬೊಮ್ಮಾಯಿ

ಹಿಂದೂಯೇತರ ವ್ಯಾಪಾರ ನಿರ್ಬಂಧ ವಿಚಾರವಾಗಿ ಮಾತನಾಡಿದ ಹಾಲಪ್ಪ, ಆಯಾ ಧಾರ್ಮಿಕ ಸ್ಥಳದಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ಇಲ್ಲ ಎಂದು ಕಾಂಗ್ರೆಸ್‍ನವರೇ ಹೇಳಿದ್ದಾರೆ. ಅದು ನಾವು ಮಾಡಿದ್ದಲ್ಲ. ಆದರೆ, ಬೇರೆ ಕಡೆ ಹೋಗಿ ಅನವಶ್ಯಕವಾಗಿ ಅಡೆತಡೆ ಮಾಡಿದರೆ ನಮ್ಮ ಸರ್ಕಾರ ಸಹಿಸುವುದಿಲ್ಲ. ಇಷ್ಟು ವರ್ಷದಿಂದ ಎಲ್ಲರೂ ಸೌಹಾರ್ದಯುತವಾಗಿದ್ದೇವೆ. ಎಲ್ಲರೂ ಒಟ್ಟಾಗಿ ಬಾಳುವುದು ನಮ್ಮ ಸಂವಿಧಾನದಲ್ಲಿದೆ. ಯಾರ ಹಕ್ಕನ್ನು ಯಾರೂ ಕಸಿದುಕೊಳ್ಳಲು ಆಗುವುದಿಲ್ಲ ಎಂದರು. ಇದನ್ನೂ ಓದಿ: ಹಿಜಬ್ ವಿದ್ಯಾರ್ಥಿನಿಯರಿಗೆ ಶಾಕ್ – ಎಸ್‌ಎಸ್‌ಎಲ್‌ಸಿ ಪರಿಕ್ಷೆಗೆ ಸಮವಸ್ತ್ರ ಕಡ್ಡಾಯ

Leave a Reply

Your email address will not be published.

Back to top button