ಮೈಸೂರು: ಜೆಡಿಎಸ್ (JDS) ತೊರೆದು ಬಿಜೆಪಿ (BJP) ಸೇರಲು ನನಗೆ ಹಣದ ಆಮಿಷ ಒಡ್ಡಿದ್ದರು. ಯಡಿಯೂರಪ್ಪ (Yediyurappa), ಅವರ ಮಗ ವಿಜಯೇಂದ್ರ (Vijayendra) ಹಾಗೂ ಶ್ರೀನಿವಾಸ್ ಪ್ರಸಾದ್ (Srinivas Prasad) ನನಗೆ ಹಣ ಕೊಡಲು ಬಂದಿದ್ದರು ಎಂದು ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ (Vishwanath) ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದರ ಬಗ್ಗೆ ತಿಳಿಯಲು ಬಾಂಬೆ ಡೈರೀಸ್ ಓದಿ. ಬಾಂಬೆ ಡೈರೀಸ್‌ನ ಮೊದಲ ಅಧ್ಯಾಯದಲ್ಲೇ ಈ ವಿಚಾರವಿದೆ ಎಂದು ವಿಶ್ವನಾಥ್ ತಿಳಿಸಿದ್ದಾರೆ. ಆದರೆ ಎಷ್ಟು ಹಣ ಕೊಡಲು ಬಂದಿದ್ದರು? ನೀವು ಹಣ ಪಡೆದುಕೊಂಡಿರಾ ಎಂಬ ಪ್ರಶ್ನೆಗೆ ಉತ್ತರ ನೀಡಲಿಲ್ಲ. ಇದನ್ನೂ ಓದಿ: ಮಂಡ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್
Advertisement
Advertisement
ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಕಿಡಿಕಾರಿದ ವಿಶ್ವನಾಥ್, ನಾನು ಅಲೆಮಾರಿ, ನೀವೂ ಅಲೆಮಾರಿಗಳ ರಾಜ. 40 ವರ್ಷಗಳಲ್ಲಿ ಎಷ್ಟು ಕಡೆ ಹೋಗಿಬಂದಿದ್ದೀರಿ ಗೊತ್ತಾ? ಒಂದೊಂದು ಪಕ್ಷಕ್ಕೆ ಎರಡೆರಡು ಬಾರಿ ಹೋಗಿ ಬಂದಿದ್ದೀರಿ. ಯಾರ ಪರವೂ ಧ್ವನಿ ಎತ್ತದ ನೀವೂ ಏಕಾಏಕಿ ನನ್ನ ಮೇಲೆ ಸೊಲ್ಲೆತ್ತಲು ಕಾರಣ ಏನು? ಯಾರನ್ನ ಮೆಚ್ಚಿಸಲು ಹೋಗುತ್ತಿದ್ದೀರಾ? ಈಗ ಬಿಜೆಪಿ ಸರ್ಕಾರ ವಿಸ್ತರಣೆ ಆಗತ್ತಿದೆ. ಇಲ್ಲಿ ಏನಾದರು ಪಡೆಯಲು ಈ ರೀತಿ ಮಾಡುತ್ತಿದ್ದೀರಾ? ನಿಮ್ಮ ಸ್ವಾರ್ಥಕ್ಕಾಗಿ ಹೀಗೆಲ್ಲ ಮಾತಾಡಬಾರದು. ನಾನು, ನೀವೂ ಹಳೆಯ ಸ್ನೇಹಿತರು. ನಿಮ್ಮ ಮಾತನ್ನು ಎಂದೂ ನಾನು ಹಿಂತೆಗೆದಿಲ್ಲ. ಅಳಿಯನಿಗೆ ನಂಜನಗೂಡು, ನರಸೀಪುರ ಮಗಳಿಗೆ ಕೊಡಿಸ್ಬೇಕು ಅಂತನಾ ಎಂದು ಖಾರವಾಗಿ ಪ್ರಶ್ನಿಸಿದರು.
Advertisement
ವಿಜಯೇಂದ್ರ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದೇನು ಪ್ರಸಾದ್? ನಾನು ಇದನ್ನು ಹೇಳಬಾರದು ಅಂತ ಇದ್ದೆ. ಅವತ್ತು ನನ್ನ ಕೈಹಿಡಿದು ಕರ್ಕೊಂಡು ಬಂದ್ರಿ. ನಿಮ್ಮ ಮಾತಿಗೆ, ನಿಮ್ಮ ಸ್ನೇಹಕ್ಕೆ ನಾನು ಕಟ್ಟು ಬಿದ್ದೆ. ನಾನು, ನೀವೂ, ದಿ.ಪತ್ರಕರ್ತ ಮಹದೇವ ಪ್ರಕಾಶ್, ರಮೇಶ್ ನಾವು ನಾಲ್ಕೇ ಜನ ಇದ್ದದ್ದು. ಆದ್ರೆ ನೀವೂ ನಾನು ಸಿದ್ದರಾಮಯ್ಯ, ಖರ್ಗೆ ಅವರನ್ನ ಭೇಟಿ ಆಗಿದ್ದಕ್ಕೆ ಅಲೆಮಾರಿ ಅಂತೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯನಂಥ ದ್ರೋಹಿಯನ್ನು ನಾನು ಎಂದೂ ನೋಡಿಲ್ಲ: ಈಶ್ವರಪ್ಪ
ಅವತ್ತು ನಾನು ಬಿಜೆಪಿಗೆ ಏನೆಲ್ಲ ಮಾಡಿದೆ. ಆದರೆ ನನಗೆ ಏನು ಕೊಡಲಿಲ್ಲ, ಏನೂ ಆಗಲಿಲ್ಲ. ಆದರೆ ಮುಕುಂದ್ ರಾವ್ ನನಗೆ ಎಂಎಲ್‌ಸಿ ಕೊಡಿಸಿದ್ರು. ಅವರಿಲ್ಲ ಅಂದಿದ್ರೆ ನನಗೆ ಏನು ಸಿಗ್ತಿರ್ಲಿಲ್ಲ. ಬಿಜೆಪಿ ಮೇಲೆ ನಂಬಿಕೆ ಹಾಳಗಬಾರದು ಅಂತ ಮಾತಾಡಿದ್ರು. ಅದರಿಂದ ನನಗೆ ಎಂಎಲ್‌ಸಿ ಸ್ಥಾನ ಸಿಕ್ತು. ಆದರೆ ಪ್ರಸಾದ್ ಸಾಹೆಬ್ರೆ ನಿಮಗೆ ನೈತಿಕತೆ ಇದೆ, ಅದನ್ನ ಕಳೆದುಕೊಳ್ಳಬೇಡಿ. ನಾನು ಅವಕಾಶವಾದಿ ರಾಜಕಾರಣಿ ಅಲ್ಲ. ಆದರೆ ನೀವೂ ಎಷ್ಟೋ ಬಾರಿ ಅವಕಾಶಕ್ಕಾಗಿ ಹೋಗಿದ್ದೀರಿ. ನಾನು ಇರುವುದರಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೀನಿ ಎಂದು ತರಾಟೆಗೆ ತೆಗೆದುಕೊಂಡರು.