– ಆಪ್ತ ಸಚಿವರ ಜೊತೆ ಸಭೆ ನಡೆಸಿದ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ರಾಜೀನಾಮೆ ಸುದ್ದಿ ಕೇಳಿ ಆಪ್ತ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ರಾಜೀನಾಮೆ ವಿಚಾರವಾಗಿ ಕೇಳಿದರೆ ಸಿದ್ದರಾಮಯ್ಯ ಅವರು ಮೌನ ವಹಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಸಿಎಂ ಜೊತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್.ಡಿ.ಪಾಟೀಲ್ (H.K.Patil), ಮಾಧ್ಯಮಗಳಲ್ಲಿ ಸುದ್ದಿ ಬಂದಿದೆ ಎಂದು ನಾನು ನಮ್ಮ ಕಳವಳ ವ್ಯಕ್ತಪಡಿಸಿದ್ದೇವೆ. ಆದರೆ, ಸಿಎಂ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲು ತೋರಿರುವ ಮುತ್ಸದ್ದಿತನ ಮೆಚ್ಚಬೇಕು: ರಂಭಾಪುರಿ ಶ್ರೀ
ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಹೈಕಮಾಂಡ್ ಹೇಳಿದಂತೆ ಸಿದ್ದರಾಮಯ್ಯನವರು ನಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸಿಎಂ ನಿವಾಸದ ಬಳಿ ಅಹಿಂದ ಸಂಘಟನೆಯ ನಾಯಕ ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದು, ಸಿಎಂ ಅವರನ್ನ ಈಗ ಭೇಟಿಯಾಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ಕೇಳಿದ್ದಾರಂತೆ. ಇದು ನಿಜ ಆಗಿದ್ರೆ ಯಾವ ರೀತಿ ಎದುರಿಸ್ತಾರೆ ಅನ್ನೋದನ್ನ ತೋರಿಸುತ್ತೇವೆ. ನಮ್ಮ ಸಮಾಜದಿಂದ ನಾವು ಸುಮ್ಮನೆ ಕೂರಲ್ಲ. ನಾಳೆಯಿಂದ ಹೋರಾಟ ಮಾಡ್ತೀವಿ. ನೇರವಾಗಿ ಹೈಕಮಾಂಡ್ ಕಾಂಗ್ರೆಸ್‌ಗೆ ಎಚ್ಚರಿಕೆ ಕೊಡ್ತೀವಿ. ಸಿದ್ದರಾಮಯ್ಯ ಅವರು ಸಂದಿಗ್ಧತೆ ಪರಿಸ್ಥಿತಿಯಲಿಲ್ಲ. ರಾಹುಲ್ ಗಾಂಧಿ ಹೇಳಿದ್ರೆ ರಾಜೀನಾಮೆ ಕೊಡ್ತೀನಿ ಅಂದಿದ್ರು ಆದ್ರೆ ಮುಂದೇನು? ಅಹಿಂದ ವರ್ಗದ ವೋಟು ಕಾಂಗ್ರೆಸ್‌ಗೆ ಹಾಕಿದ್ದೇವೆ. ಯಾವುದೇ ಬದಲಾವಣೆ ಮಾಡಬಾರದು. ಸಿದ್ದರಾಮಯ್ಯನವರ ವರ್ಚಸ್ಸು ಕಡೆಗಣಿಸಬಾರದು. ಈ ಸರ್ಕಾರ ಬಂದಿರೋದು ಅಹಿಂದ ವರ್ಗದಿಂದ. ಅಹಿಂದ ವರ್ಗದವರನ್ನ ಯಾರಾದ್ರು ಸಿಎಂ ಮಾಡಲಿ. ಸಮ ಸಮಾಜ ನಿರ್ಮಾಣ ಮಾಡ್ತೀವಿ ಅಂತಾರೆ ಕಾಂಗ್ರೆಸ್‌ನವರು ಎಲ್ಲಿ ಮಾಡ್ತಿದ್ದಾರೆ. ನಮ್ಮ ಸಮುದಾಯದ ಶಾಸಕರು ಸಿಎಂ ಜೊತೆ ನಿಲ್ಲಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ಮುಂದೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆಪ್ತರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು. ಮುಂದೆ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಏನು ಎಂಬ ಪ್ರಶ್ನೆಯಲ್ಲೇ ಆಪ್ತರಿಂದ ಸಿಎಂ ಜತೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಸಿದ್ದರಾಮಯ್ಯ ರಾಜೀನಾಮೆ ವಿಷಯದ ಬಗ್ಗೆ ಆಪ್ತರಿಗೆ ಶಾಕ್ ಆಗಿದೆ. ಹೈಕಮಾಂಡ್ ಜೊತೆಗಿನ ಮಾತುಕತೆ ಬಗ್ಗೆ ಸಿಎಂ ಸಂಪೂರ್ಣ ವಿವರ ನೀಡಿದ್ದಾರೆ. ಆಪ್ತರಿಗೆ ರಾಜೀನಾಮೆ ನೀಡೋ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಿಲ್ಲ: ಶೋಭಾ ಕರಂದ್ಲಾಜೆ
ಸುಮಾರು 2 ಗಂಟೆಯಿAದ ಆಪ್ತರ ಜೊತೆ ಸಿಎಂ ಸಭೆ ನಡೆಸಿದ್ದಾರೆ. ಹೈಕಮಾಂಡ್ ನಾಯಕರ ಜೊತೆಗಿನ ಮಾತು, ರಾಜೀನಾಮೆ ವಿಚಾರ ಎಲ್ಲವನ್ನು ಆಪ್ತರ ಬಳಿ ಸಿಎಂ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದುಬಂದಿದೆ.
