ಬೆಂಗಳೂರು: ರಂಗಭೂಮಿ ನಾಟಕಗಳಿಗೆ (Theater Play) ಸರ್ಕಾರ ಅನುದಾನ (Fund) ಮೀಸಲಿಡಬೇಕು. ಪ್ರತಿ ತಾಲೂಕುಗಳಲ್ಲಿ ರಂಗಭೂಮಿ ಕಲಾವಿದರ ಸಂಘಗಳನ್ನು ರಚಿಸಿ ಸಾಮಾಜಿಕ ಐತಿಹಾಸಿಕ ಮತ್ತು ರಾಮಾಯಣ, ಮಹಾಭಾರತದಂತಹ ನಾಟಕಗಳು ಹೆಚ್ಚಾಗಬೇಕು ಎಂದು ವಕೀಲ ಶಿವರಾಜು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ, ಶ್ರೀಧರ್ ರಂಭೂಮಿ ಕಲಾವಿದರ ಬಳಗದ ವತಿಯಿಂದ ಶ್ರೀ ಕೃಷ್ಣಪದೇಶ ನಾಟಕ ಪುದರ್ಶನವನ್ನು ಆಯೋಜಿಸಲಾಗಿತ್ತು. ಕಲಾವಿದರು ಆಕರ್ಷಕ ನಾಟಕ ಪ್ರದರ್ಶನ ನೀಡಿದರು. ಈ ವೇಳೆ ಮಾತನಾಡಿದ ವಕೀಲ ಶಿವರಾಜು, ಆನೇಕಲ್ ತಾಲೂಕು ಗಡಿಭಾಗವಾಗಿದ್ದರೂ ತಿಂಗಳಿಗೆ ಒಮ್ಮೆಯಾದರೂ ಆನೇಕಲ್ ತಾಲೂಕಿನಲ್ಲಿ ನಾಟಕಗಳನ್ನು ಆಯೋಜಿಸುವುದು ರಂಗಭೂಮಿಯ ಪ್ರೋತ್ಸಾಹಕ್ಕೆ ಉದಾಹರಣೆಯಾಗಿದೆ. ನೆರೆ ರಾಜ್ಯ ತಮಿಳುನಾಡಿನಲ್ಲಿಯೂ ಕನ್ನಡ ನಾಟಕವನ್ನು ಅಭಿನಯಿಸುವುದು ಶ್ಲಾಘನೀಯ ಎಂದರು. ಇದನ್ನೂ ಓದಿ: ಪೋಕ್ಸೋ ಪ್ರಕರಣ – ರೆಗ್ಯುಲರ್ ಬೇಲ್‌ಗೆ ಅರ್ಜಿ ಸಲ್ಲಿಸಿದ ವಚನಾನಂದ ಸ್ವಾಮೀಜಿ
ಲೇಖಕ ಚಿಲಿಪಿಲಿ ಸಂತೋಷ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾಟಕ ಪ್ರದರ್ಶನಗಳು ಕಡಿಮೆಯಾಗುತ್ತಿದೆ. ಯುವಕರು ಮೊಬೈಲ್, ಟಿವಿ ಧಾರವಾಹಿ, ಸಿನೆಮಾಗಳಿಗೆ ದಾಸರಾಗುತ್ತಿದ್ದಾರೆ. ಆದರೆ ರಂಗಭೂಮಿ ನಾಟಕಗಳಲ್ಲಿ ಭಾವನೆಗಳಿರುತ್ತದೆ ಮತ್ತು ಸಾಮಾಜಿಕ ಸಂದೇಶಗಳನ್ನು ನೀಡುತ್ತವೆ. ಆದರೆ ರಂಗಭೂಮಿ ನಾಟಕಗಳಿಗೆ ಇತ್ತೀಚಿನ ದಿನಗಳಲ್ಲಿ ಮಹತ್ವ ಕಡಿಮೆಯಾಗುತ್ತಿರುವುದು ಆತಂಕಕಾರಿಯಾಗಿದೆ ಎಂದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ- ದೊಡ್ಡವರ ವಿರುದ್ಧ ಶೀಘ್ರವೇ ಎಫ್‌ಐಆರ್ ಸಾಧ್ಯತೆ
ನಾಟಕ ಪ್ರದರ್ಶನದ ಪುಯುಕ್ತ ಹಿರಿಯ ರಂಗಭೂಮಿ ಕಲಾವಿದರು ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ 20ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಎಂ.ಶ್ರೀನಿವಾಸಾಚಾರಿ ಅವರ ನಿರ್ದೇಶನದಲ್ಲಿ ಶ್ರೀ ಕೃಷ್ಣೋಪದೇಶ ನಾಟಕ ಪ್ರದರ್ಶನ ನಡೆಯಿತು. ನಾಟಕಕ್ಕೆ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಹಾಕಿ ಪ್ರೋತ್ಸಾಹ ನೀಡಿದರು. ಜಿಗಣಿಯ ಶ್ರೀಧರ್ ಶ್ರೀಕೃಷ್ಣನಾಗಿ, ಕರ್ಣನಾಗಿ ವಕೀಲ ಶಿವರಾಜು, ರಾಜು ಭೀಮನಾಗಿ, ರಾಮಸ್ವಾಮಿ ಅರ್ಜುನನಾಗಿ, ವೀರಭದ್ರಪ್ಪ ಅಭಿಮನ್ನ ದುರ್ಯೋಧನನಾಗಿ ವಸಂತ ಕುಮಾರ್, ವಿಧುರನಾಗಿ ಸಂಜಯ್, ದ್ರೋಣನಾಗಿ ಮಂಜುನಾಥರೆಡ್ಡಿ. ಧರ್ಮರಾಯನಾಗಿ ಸಂಪಂಗಿ, ದುಶ್ಯಾಸನವಾಗಿ ಶ್ರೀನಿವಾಸರೆಡ್ಡಿ, ಶಕುನಿಯಾಗಿ ಚಿಲಿಪಿಲಿ ಸಂತೋಷ್, ಭೀಷ್ಮನಾಗಿ ನಾರಾಯಣ್, ಕನಕದುರ್ಗ, ಜ್ಯೋತಿ ಪ್ರಸಾದ್, ರಮ್ಯ, ಯಶ್ವಂತ್, ತಾಂಡವಮೂರ್ತಿ, ಸಾಗರ್ ಅವರು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದರು. ಇದನ್ನೂ ಓದಿ: ಸಿನಿಮಾ ಮೀರಿಸೋ ಲವ್ ಟ್ರ್ಯಾಜಿಡಿ – 6 ವರ್ಷಗಳ ಪ್ರೇಮ ಪ್ರಿಯಕರನ ಸಾವಿನಲ್ಲಿ ಅಂತ್ಯ!
