Connect with us

ಚಿನ್ನದ ವ್ಯಾಪಾರಿ ಪುತ್ರನ ಬರ್ಬರ ಕೊಲೆ, ಕೆಲಸಗಾರನ ಅಪಹರಣ

ಚಿನ್ನದ ವ್ಯಾಪಾರಿ ಪುತ್ರನ ಬರ್ಬರ ಕೊಲೆ, ಕೆಲಸಗಾರನ ಅಪಹರಣ

– ಹಾಡಹಗಲೇ ರೂಂಗೆ ನುಗ್ಗಿ ಮಚ್ಚಿನಿಂದ ಕೊಚ್ಚಿ ಹತ್ಯೆ

ಯಾದಗಿರಿ: ಚಿನ್ನದ ವ್ಯಾಪಾರಿ ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಿ, ಕೆಲಸಗಾರನನ್ನು ಅಪಹರಿಸಿರುವ ಘಟನೆ ಜಿಲ್ಲೆಯ ಹುಣಸಗಿ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿ ನಡೆದಿದೆ.

ಧನಲಕ್ಷ್ಮೀ ಚಿನ್ನದ ಅಂಗಡಿಯ ಮಾಲೀಕ ಜಗದೀಶ್ ಅವರ ಪುತ್ರ ನರೇಂದ್ರ(25) ಕೊಲೆಯಾದ ಯುವಕ. ಕಿಶೋರ್ ಅಪಹರಣಕ್ಕೊಳಗಾದ ಕೆಲಸಗಾರ. ಕೊಲೆಯಾದ ನರೇಂದ್ರ ಮತ್ತು ಕೆಲಸಗಾರ ಕಿಶೋರ್ ರೂಮ್ ನಲ್ಲಿ ಇದ್ದರು. ಈ ವೇಳೆ ಏಕಾಏಕಿ ರೂಮ್ ಗೆ ನುಗ್ಗಿದ ದುಷ್ಕರ್ಮಿಗಳು ನರೇಂದ್ರನ್ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಕಿಶೋರ್ ರನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾರೆ.

ಹಾಡಹಗಲೇ ಕೃತ್ಯ ನಡೆದಿದ್ದು, ಇದರಿಂದಾಗಿ ಹುಣಸಗಿ ಜನ ಬೆಚ್ಚಿಬಿದ್ದಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

Advertisement
Advertisement