Districts
10ನೇ ಕ್ಲಾಸ್ ಬಾಲಕಿಯನ್ನ ಕಿಡ್ನಾಪ್ ಮಾಡಿ 120 ಅಡಿ ಮೇಲಿಂದ ಕಾಲುವೆಗೆ ತಳ್ಳಿದ್ರಂತೆ

ಶಿವಮೊಗ್ಗ: 10ನೇ ಕ್ಲಾಸ್ ಬಾಲಕಿಯನ್ನ ಅಪಹರಣ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಲ್ಲಿನ ಗೋಪಾಳ ಬಡಾವಣೆಯ ಈಶ್ವರಿ ಎಂಬಾಕೆಯನ್ನ ಓಮ್ನಿ ಕಾರ್‍ನಲ್ಲಿ ಕಿಡ್ನಾಪ್ ಮಾಡಿ ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆ ಬಳಿ 120 ಅಡಿ ಮೇಲಿಂದ ತುಂಗಾ ನಾಲೆಗೆ ತಳ್ಳಲಾಗಿದೆ. ಅದೃಷ್ಟಕ್ಕೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರಿಂದ ಬಾಲಕಿಯ ರಕ್ಷಣೆ ಮಾಡಲಾಗಿದೆ.
ಅಸ್ವಸ್ಥ ಬಾಲಕಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿ ಹೇಳಿಕೆ ಮೇಲೆ ಆಕೆಯನ್ನು ನಾಲೆಗೆ ದೂಡಿದವರು ಯಾರು ಎಂಬ ಬಗ್ಗೆ ತುಂಗಾ ನಗರ ಪೊಲೀಸರಿಂದ ತನಿಖೆ ನಡೆಯುತ್ತಿದೆ.
