LatestLeading NewsMain PostNational

ಎಷ್ಟೋ ಸಲ ಹಸಿದ ಹೊಟ್ಟೆಯಲ್ಲೇ ಮಲಗುತ್ತಿದ್ದ ಬುಡಕಟ್ಟು ಜನಾಂಗದವ ಈಗ ಅಮೆರಿಕದಲ್ಲಿ ವಿಜ್ಞಾನಿ

ಮುಂಬೈ: ತಿನ್ನಲು ಅನ್ನವಿಲ್ಲದೇ ಎಷ್ಟೋ ಬಾರಿ ಹೊಟ್ಟೆ ಹಸಿವಿನಲ್ಲೇ ಮಲಗಿ ಕಷ್ಟದ ಜೀವನ ನಡೆಸಿದ್ದ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ಈಗ ಅಮೆರಿಕದಲ್ಲಿ ವಿಜ್ಞಾನಿಯಾಗಿದ್ದಾರೆ.

ಮಹಾರಾಷ್ಟ್ರದ (Maharashtra) ಗಡ್ಚಿರೋಲಿಯ ದೂರದ ಹಳ್ಳಿಯಲ್ಲಿದ್ದ ಭಾಸ್ಕರ್‌ ಹಲಾಮಿ (44) ತಮ್ಮ ಕಠಿಣ ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ಮಹತ್ತರ ಸಾಧನೆ ಮಾಡಿದ್ದಾರೆ. ಕುರ್ಖೇಡಾ ತಹಸಿಲ್‌ನ ಚಿರ್ಚಾಡಿ ಗ್ರಾಮದ ಬುಡಕಟ್ಟು ಸಮುದಾಯದಲ್ಲಿ ಬೆಳೆದ ಹಲಾಮಿ ಈಗ ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಬಯೋಫಾರ್ಮಾಸ್ಯುಟಿಕಲ್ ಕಂಪನಿಯಾದ ಸಿರ್ನಾಮಿಕ್ಸ್ ಇಂಕ್‌ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಇದನ್ನೂ ಓದಿ: ಏರ್‌ಶೋನಲ್ಲಿ 2 ವಿಮಾನ ಡಿಕ್ಕಿ – 6 ಮಂದಿ ಸಾವು

ಭಾಸ್ಕರ್‌ ಹಲಾಮಿ ಅವರು ಚಿರ್ಚಾಡಿಯಿಂದ ಮೊದಲ ವಿಜ್ಞಾನ ಪದವೀಧರರಾಗಿದ್ದಾರೆ. ತಮ್ಮ ಹಳ್ಳಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಗಳಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. “ನಾವು ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟ ದಿನಗಳಿದ್ದವು. ಆಹಾರ ಅಥವಾ ಕೆಲಸವಿಲ್ಲದ ಕುಟುಂಬವು ಆ ಹಂತದಲ್ಲಿ ಹೇಗೆ ಬದುಕುಳಿಯಿತು ಎಂಬ ಪ್ರಶ್ನೆ ನನ್ನ ಪೋಷಕರನ್ನು ಈಗಲೂ ಕಾಡುತ್ತದೆ” ಎಂದು ಹಲಾಮಿ ನೆನಪಿಸಿಕೊಂಡಿದ್ದಾರೆ.

ಗಡ್ಚಿರೋಲಿಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಗಳಿಸಿದ ನಂತರ ನಾಗ್ಪುರದ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ರಸಾಯನಶಾಸ್ತ್ರದಲ್ಲಿ ಹಲಾಮಿ ಸ್ನಾತಕೋತ್ತರ ಪದವಿ ಪಡೆದರು. 2003 ರಲ್ಲಿ ನಾಗಪುರದ ಪ್ರತಿಷ್ಠಿತ ಲಕ್ಷ್ಮೀನಾರಾಯಣ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (LIT)ಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಲಾಮಿ ಸೇವೆ ಸಲ್ಲಿಸಿದ್ದರು. ನಂತರ ಮಿಚಿಗನ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. ಇದನ್ನೂ ಓದಿ: ಕಾಲುವೆಗೆ ಉರುಳಿದ ಬಸ್ – ಭೀಕರ ಅಪಘಾತಕ್ಕೆ 22 ಬಲಿ, 7 ಮಂದಿಗೆ ಗಾಯ

ನಾವು ಮಹುವಾ ಹೂವುಗಳನ್ನು ಬೇಯಿಸಿ ತಿಂದಿದ್ದೇವೆ. ಅದು ತಿನ್ನಲು ಮತ್ತು ಜೀರ್ಣಿಸಿಕೊಳ್ಳಲು ಸುಲಭವಲ್ಲ. ಪರ್ಸೋಡ್ (ಕಾಡಲ್ಲಿ ಸಿಗುವ ಅಕ್ಕಿ) ಸಂಗ್ರಹಿಸಿ ಅಂಬಲಿ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ನಾವಷ್ಟೇ ಅಲ್ಲ, ಈ ಹಳ್ಳಿಗಳಲ್ಲಿ ಶೇ.90 ಮಂದಿ ಈ ರೀತಿಯಲ್ಲೇ ಬದುಕಬೇಕಾಗಿತ್ತು ಎಂದು ಕಷ್ಟದ ದಿನಗಳನ್ನು ನೆನೆದಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button