ನವದೆಹಲಿ: ಮಹಾರಾಷ್ಟ್ರ (Maharashtra) ರಾಜಕೀಯದಲ್ಲಿ ಶಿವಸೇನೆ (UBT) ಪಕ್ಷದೊಳಗಿನ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಪಕ್ಷದ ಆರು ಲೋಕಸಭಾ ಸಂಸದರು ಇದೀಗ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದು ಪ್ರತ್ಯೇಕ ಬಣವಾಗಿ ಗುರುತಿಸುವಂತೆ ಮನವಿ ಮಾಡಿದ್ದಾರೆ.
ಶಿವಸೇನೆ (UBT) ಪಕ್ಷದ ಒಟ್ಟು ಒಂಬತ್ತು ಲೋಕಸಭಾ ಸದಸ್ಯರ ಪೈಕಿ ಆರು ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಸದನದೊಳಗೆ ಪ್ರತ್ಯೇಕ ಗುಂಪಾಗಿ ಮಾನ್ಯತೆ ನೀಡಬೇಕು ಹಾಗೂ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಕೋರಿದ್ದಾರೆ.
ಇದೇ ಆರು ಸಂಸದರು ಪಕ್ಷದ ಸಂಸದೀಯ ಸಭೆಗೆ ಗೈರಾಗಿದ್ದರು. ಸಂಜಯ್ ಜಾಧವ್, ಭೌಸಾಹೇಬ್ ವಾಕ್ಚೌರೆ, ಓಂರಾಜೆ ನಿಂಬಾಳ್ಕರ್, ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್ ಹಾಗೂ ನಾಗೇಶ್ ಪಾಟೀಲ್ ಅಷ್ಟಿಕರ್ ಈ ಬೆಳವಣಿಗೆಯ ಕೇಂದ್ರಬಿಂದುವಾಗಿದ್ದಾರೆ. ಈ ಸಂಸದರು ಜೂನ್ 22ರಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಎಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ಸೇರುವ ಸಾಧ್ಯತೆ ಇದೆ.ಇದನ್ನೂ ಓದಿ: 45 ದಿನಗಳಲ್ಲಿ ಶಿಮ್ಲಾಗೆ 15 ಲಕ್ಷ ಪ್ರವಾಸಿಗರ ವಾಹನಗಳ ಲಗ್ಗೆ
ಈ ಬೆಳವಣಿಗೆ ಉದ್ಧವ್ ಠಾಕ್ರೆ (Uddhav Thackeray) ಅವರಿಗೆ ಮತ್ತೊಂದು ದೊಡ್ಡ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿದೆ. ಈಗಾಗಲೇ ಶಿಂಧೆ ಬಣದ ಬಂಡಾಯದಿಂದ ಶಿವಸೇನೆ ಒಮ್ಮೆ ವಿಭಜನೆಯಾಗಿತ್ತು. ಇದೀಗ ಲೋಕಸಭೆಯಲ್ಲೂ ಪಕ್ಷದ ಬಲ ಕುಗ್ಗುವ ಸಾಧ್ಯತೆ ಎದುರಾಗಿದೆ. ಇದನ್ನೂ ಓದಿ: ನೀಟ್ ಮರುಪರೀಕ್ಷೆಗೂ ಮುನ್ನ ಡೆತ್‌ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ
