– ಪಿಯುಸಿಯಲ್ಲಿ 96.7% ಅಂಕ ಪಡೆದಿದ್ದ ಯುವತಿ
ಡೆಹ್ರಾಡೂನ್: ನೀಟ್ (NEET) ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 23 ವರ್ಷದ ಯುವತಿ (student suicide) ಡೆತ್‌ನೋಟ್ (Death note) ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ.
ಮೃತ ಯುವತಿಯನ್ನು ರಿಯಾ ಕುಮಾರಿ ಎಂದು ಗುರುತಿಸಲಾಗಿದೆ. ರಿಯಾ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಪಿಯುಸಿಯಲ್ಲಿ ಶೇ.96.7 ಅಂಕ ಗಳಿಸಿ ಕಾಲೇಜ್ ಟಾಪರ್ ಕೂಡ ಆಗಿದ್ದರು. ನೀಟ್ ಮರುಪರೀಕ್ಷೆ ಕುರಿತು ಒತ್ತಡದಲ್ಲಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆ ನಡೆದ ದಿನ ತಾಯಿ ಊಟಕ್ಕೆ ಕರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ರಿಯಾ ಮೃತಪಟ್ಟಿರುವುದು ಕಂಡುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವತಿಯ ಕೋಣೆಯಲ್ಲಿ ಡೆತ್‌ನೋಟ್ ಕೂಡ ಸಿಕ್ಕಿದೆ.
ಡೆತ್‌ನೋಟ್‌ನಲ್ಲಿ ಏನಿದೆ?
ಡೆತ್‌ನೋಟ್‌ನಲ್ಲಿ ರಿಯಾ, ʼಅಮ್ಮ ಅಪ್ಪ ಐ ಲವ್ ಯೂ.. ನಿಮಗೆ ಭಾರವಾಗಿದ್ದಕ್ಕೆ ಕ್ಷಮಿಸಿ. ಇದು ಯಾರ ತಪ್ಪೂ ಅಲ್ಲ, ಇದು ನನ್ನದೇ ಆದ ಅಸಮರ್ಥತೆ. ಇದನ್ನು ಕೊನೆಗೊಳಿಸುವುದೇ ಉತ್ತಮ ಆಯ್ಕೆ. ನಾನು ನಿನ್ನನ್ನು ಪ್ರೀತಿಸುತ್ತೇನೆ.. ಕ್ಷಮಿಸಿ. ಎಂದು ಬರೆದಿದ್ದಾಳೆ. ಇದನ್ನೂ ಓದಿ: 45 ದಿನಗಳಲ್ಲಿ ಶಿಮ್ಲಾಗೆ 15 ಲಕ್ಷ ಪ್ರವಾಸಿಗರ ವಾಹನಗಳ ಲಗ್ಗೆ
ಡೆಹ್ರಾಡೂನ್ ಸರ್ಕಲ್ ಆಫೀಸರ್ ಅಂಕಿತ್ ಕಂಡಾರಿ ಮಾತನಾಡಿ, ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ ಒತ್ತಡದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಬೊಲೆರೋ – 7 ಮಂದಿ ಸ್ಥಳದಲ್ಲೇ ಸಾವು
