ಬೆಂಗಳೂರು: ಸರ್ಕಾರ ಪರೀಕ್ಷೆ ಇಲ್ಲದೆ ಪಶು ವೈದ್ಯರನ್ನ ನೇರವಾಗಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಎ.ಮಂಜು (A.Manju) ಸರ್ಕಾರವನ್ನು ಆಗ್ರಹಿಸಿದ್ದಾರೆ.
KPSC ಪಶು ವೈದ್ಯರ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪಶುವೈದ್ಯರ ನೇಮಕಾತಿಯಲ್ಲಿ 80 ಲಕ್ಷ ಹಣ ಪಡೆದು ಕೆಲಸ ಕೊಡುವ ಬಗ್ಗೆ ಸುದ್ದಿಯಾಗಿದೆ. 2017ರ ಸೆಪ್ಟೆಂಬರ್‌ನಲ್ಲಿ ನಾನು ಸಚಿವನಾಗಿದ್ದಾಗ 650 ಜನ ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಕ್ಯಾಬಿನೆಟ್ ಒಪ್ಪಿಗೆ ಪಡೆದಿದ್ದೆ. ಮೀಸಲಾತಿ ಸೇರಿ ನೇರ ನೇಮಕಗೊಂಡ ಮಾಡಿದ್ದೆವು. ರೈತರ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ನೇಮಕಾತಿ ಮಾಡಲಾಗಿತ್ತು. ಆದರೆ, ಈ ಸರ್ಕಾರ ಯಾಕೆ ನೇರ ನೇಮಕಾತಿ ಮಾಡಿಲ್ಲ. ಸರ್ಕಾರ ಈಗಲಾದ್ರೂ ಕಣ್ಣು ತೆಗೆದು ಮೆರಿಟ್ ಇರೋರಿಗೆ ರೋಸ್ಟರ್ ಪ್ರಕಾರ ನೇಮಕಾತಿ ಮಾಡಿಕೊಳ್ಳಬೇಕು ಅಂತ ಆಗ್ರಹಿಸಿದರು. ಇದನ್ನೂ ಓದಿ: ಕಾವೇರಿ ಕಿಚ್ಚು – ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್
ಮೆರಿಟ್ ಇರೋರಿಗೆ ನೇರ ನೇಮಕಾತಿ ಮಾಡದಿದ್ರೆ ಸರ್ಕಾರಕ್ಕೆ ಇದರಲ್ಲಿ ಬೇರೆ ಏನೋ ವಿಚಾರ ಇದೆ ಅಂತಾಗಲಿದೆ. ಎಲ್ಲಾ ವೆಟರ್ನರಿ ಡಾಕ್ಟರ್‌ಗಳಿಗೆ ಅಲಯನ್ಸ್ ಕೂಡ ನೀಡಲಾಗಿತ್ತು. ಕೂಡಲೇ ಪಶುವೈದ್ಯರನ್ನ ನೇರ ನೇಮಕಾತಿ ಮಾಡಬೇಕು ಅಂತ ಸರ್ಕಾರಕ್ಕೆ ಒತ್ತಾಯಿಸಿದರು.

ತಮಿಳುನಾಡಿಗೆ ಸರ್ಕಾರ ನೀರು ಬಿಡಬಾರದು
ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಸರ್ಕಾರ ನೀರು ಬಿಡಬಾರದು. ನಮ್ಮ ಕಾವೇರಿ ಕೊಳ್ಳದ ಪಾತ್ರದಲ್ಲಿ 60% ನೀರು ಕಡಿಮೆಯಾಗಿದೆ. ಕೆರೆ ಕಟ್ಟೆಗಳು ಖಾಲಿಯಾಗಿವೆ. ತಮಿಳುನಾಡಿಗೆ ನೀರು ಹರಿಸಿದ್ರೆ ನಮ್ಮ ಕುಡಿಯುವ ನೀರಿಗೆ ಜಾನುವಾರುಗಳಿಗೆ ನೀರಿಲ್ಲದಂತಗಾಲಿದೆ. ಇದರಲ್ಲಿ ರಾಜಕೀಯ ಮಾಡಬಾರದು. ಮುಂದಿನ ದಿನಗಳಲ್ಲಿ ನಾವು ಹೋರಾಟ ಮಾಡಿದ್ರೆ ಸರ್ಕಾರವಾಗಿ ನೀವೇ ಹೊಣೆ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಸರ್ವಪಕ್ಷ ಸಭೆ ಕರೆದು ನೀರು ಬಿಡಲು ಕೇಳಿದ್ರೆ ನಾವು ಒಪ್ಪಲ್ಲ. ತಮಿಳುನಾಡಿಗೆ ನೀರು ಬಿಡೋದಾದ್ರೆ ನಮ್ಮ ಕೆರೆಗಳಿಗೆ ನೀರು ಬಿಡಿ. ಬೋರ್ವೆಲ್ ಕೊಡಿ. ಮೊದಲು ನಮ್ಮ ಹೊಟ್ಟೆ ತುಂಬಬೇಕು ಆಮೇಲೆ ಬೇರೆಯವರದ್ದು ಎಂದರು. ಇದನ್ನೂ ಓದಿ: Karnataka Cauvery Protest Live Updates | ಕಾವೇರಿ ಕಿಚ್ಚು – KRS ಡ್ಯಾಮ್ ಬಳಿ ತೀವ್ರಗೊಂಡ ಪ್ರತಿಭಟನೆ
ತಮಿಳುನಾಡು ವಿಜಯ್ ಬರೋದಾದ್ರೆ ನಮ್ಮ ಆಗ್ರಹ ಇಷ್ಟೇ. ಮೊದಲು ಮೇಕೆದಾಟು ಕಟ್ಟಿ. ಮೇಕೆದಾಟು ಇಂದ ನಮಗೆ ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ಅನುಕೂಲ ಆಗಲಿದೆ. ಸಮುದ್ರಕ್ಕೆ ನೀರು ಹೋಗುವ ಮೊದಲು ನಮಗೆ ಅನುಕೂಲ ಆಗಲಿದೆ. ವಿಜಯ್ ಕೂಡ ಕಾಂಗ್ರೆಸ್ ಜೊತೆ ಹೊಂದಾಣಿಕೆ ಇರೋ ಸರ್ಕಾರದಲ್ಲಿದ್ದಾರೆ. ಮೇಕೆದಾಟು ಕಟ್ಟಿ ನೀರು ಪಡೆಯಬೇಕು. ಆಮೇಲೆ ತಮಿಳುನಾಡಿಗೂ ತೆಗೆದುಕೊಂಡು ಹೋಗಲಿ. ನಾವು ಡ್ಯಾಮ್ ಕಟ್ಟಬೇಕಾದ್ರೆ ಯೂಸರ್ಸ್ ಹಣ ಹಾಕಬೇಕು. ಮೇಕೆದಾಟು ಸ್ಟೋರ್ ಮಾಡಿ ಬಿಡೋದ್ರಿಂದ ಅವರಿಗೆ ಕೃಷಿಗೆ ಅನುಕೂಲ ಆಗಲಿದೆ. ತಮಿಳುನಾಡು ಸಿಎಂಗೆ ಮನವಿ ಮಾಡ್ತೇನೆ. ಮೇಕೆದಾಟು ಯೋಜನೆಗೆ ಸಹಮತಿ ಕೊಡಬೇಕು ಎಂದು ಆಗ್ರಹಿಸಿದರು.
