ಮೈಸೂರು: ಕಾಡಿನಿಂದ ನಾಡಿಗೆ ಬಂದ ಆನೆಗಳು ಕಬ್ಬಿನ ಗದ್ದೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬಸಾಪುರದಲ್ಲಿ ನಡೆದಿದೆ.
5 ಆನೆಗಳ ಹಿಂಡು ಬಸಾಪುರ ಗ್ರಾಮ ಹೊಲಕ್ಕೆ ನುಗ್ಗಿ 5 ಎಕರೆ ಕಬ್ಬು, 2 ಎಕರೆ ಜೋಳ ಬೆಳೆ ನಾಶ ಮಾಡಿವೆ. ಗ್ರಾಮದ ನಾಗರಾಜು, ಸೌಮ್ಯ ಹಾಗೂ ನಾಗಮ್ಮ ಎಂಬುವವರ ಜಮೀನಿನಲ್ಲಿ ಆನೆಗಳು ಪುಂಡಾಟ ಮಾಡಿವೆ.
Advertisement
ಈ ಕಾರಣ ಸ್ಥಳಕ್ಕೆ ಆಗಮಿಸಿದ ಹಿರಿಯ ಅರಣ್ಯ ಅಧಿಕಾರಿ ಪರಮೇಶ್, ಕಬ್ಬಿನ ಗದ್ದೆಯೊಳಗೆ ಸೇರಿಕೊಂಡಿರುವ ಆನೆಗಳನ್ನು ಸಂಜೆವರೆಗೂ ಓಡಿಸುವುದು ಕಷ್ಟ. ಇದೀಗ ಕಾರ್ಯಚರಣೆ ನಡೆಸಿದರೆ ಗ್ರಾಮದ ಒಳಗಡೆ ಆನೆಗಳು ಬರುವ ಭೀತಿ ಇದೆ. ಹೀಗಾಗಿ ಕಾರ್ಯಾಚರಣೆ ಆರಂಭಿಸಿಲ್ಲ ಎಂದು ಹೇಳಿದ್ದಾರೆ. ಈಗ ಸ್ಥಳದಲ್ಲೇ ಎಸಿಎಫ್ ಹಾಗೂ ಆರ್ಎಫ್ಓ ಹಾಗೂ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.