-`ಜೈ ಸೀತಾ ರಾಮ್’ ಎಂದು ಯಾಕೆ ಕೂಗಲ್ಲ?
ಭೋಪಾಲ್: ಭಾರತ್ ಜೋಡೋ(Bharat Jodo) ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ(Rahul Gandhi) `ಶ್ರೀರಾಮ-ಸೀತೆ’ಯ ನಾಮಸ್ಮರಣೆ ಮಾಡಿದ್ದು, ಬಿಜೆಪಿ-ಆರ್‌ಎಸ್‍ಎಸ್‍ನವರು ಸೀತಾಮಾತೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಬಿಜೆಪಿಗರು-ಆರ್‌ಎಸ್‌ಎಸ್‍ನರು(BJP-RSS) ಜೈ ಶ್ರೀರಾಮ್(Jai Shri Ram) ಎಂದು ಹೇಳುತ್ತಾರೆಯೇ ಹೊರತು ಜೈ ಸಿಯಾ ರಾಮ್ (Jai Siya Ram) ಅಥವಾ ಹೇ ರಾಮ್(Hey Ram) ಎಂದು ಘೋಷಣೆ ಕೂಗುವುದಿಲ್ಲ. ಭಗವಾನ್ ರಾಮ ಯಾವ ಭಾವನೆಯಿಂದ ಜೀವನ ಸಾಗಿಸಿದ್ದನೋ ಆ ರೀತಿಯಾಗಿ ಇವರು ಬದುಕುತ್ತಿಲ್ಲ ಎಂದು ದೂರಿದ್ದಾರೆ.
Advertisement
Advertisement
ರಾಮ ಯಾರಿಗೂ ಅನ್ಯಾಯ ಮಾಡಿಲ್ಲ. ರಾಮ ಸಮಾಜವನ್ನು ಜೋಡಿಸುವ ಕಾರ್ಯ ಮಾಡಿದ್ದ. ರೈತರು, ವ್ಯಾಪಾರಿಗಳು, ಅಶಕ್ತರ ರಕ್ಷಕನಾಗಿದ್ದ. ಆದರೆ, ಬಿಜೆಪಿ-ಆರ್‌ಎಸ್‌ಎಸ್‍ನವರು ಹೀಗೆ ಮಾಡುತ್ತಿಲ್ಲ. `ಜೈ ಸಿಯಾ ರಾಮ್’ ಅಂದರೆ ಸೀತಾ-ರಾಮ ಇಬ್ಬರೂ ಒಂದು. ಸೀತೆಯ ಗೌರವಕ್ಕಾಗಿ ರಾಮ ಹೋರಾಡಿದ್ದ. ಆದರೆ ಬಿಜೆಪಿ ಮಹಿಳೆಯರ ಗೌರವಕ್ಕಾಗಿ ಹೋರಾಡುತ್ತಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಆವರಣದ ಒಳಗಡೆ ಮೊಬೈಲ್, ಕ್ಯಾಮೆರಾಕ್ಕೆ ನಿರ್ಬಂಧ ವಿಧಿಸಿ: ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
Advertisement
ಆರ್‌ಎಸ್‍ಎಸ್‍ನಲ್ಲಿ ಓರ್ವ ಮಹಿಳಾ ಸಂಘಟಕಿಯೂ ಇಲ್ಲ. ಯಾಕೆಂದರೆ ಮಹಿಳೆಯರನ್ನು ಅವರು ಸೇರಿಸಿಕೊಳ್ಳುವುದೇ ಇಲ್ಲ. ಈ ವಿಚಾರವನ್ನು ಮಧ್ಯಪ್ರದೇಶದ ಪಂಡಿತರೊಬ್ಬರು ನನಗೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ರಾಹುಲ್ ಆರೋಪಕ್ಕೆ ಗುಜರಾತ್ ಪ್ರಚಾರ ಕಣದಲ್ಲಿ ತಿರುಗೇಟು ಕೊಟ್ಟಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಚುನಾವಣೆಗಳಲ್ಲಿ ಸತತ ಸೋಲಿನ ಬಳಿಕ ರಾಹುಲ್ ಗಾಂಧಿ ಈಗ ಹಿಂದೂವಾದಿಯಾಗಿದ್ದಾರೆ. ರಾಮನ ಭಕ್ತನಾಗಿಬಿಟ್ಟಿದ್ದಾರೆ. ಚೂರಾಗಿರೋದು ಕಾಂಗ್ರೆಸ್ ಪಕ್ಷವೇ ಹೊರತು ಭಾರತ ದೇಶ ಅಲ್ಲ. ಇದು ಕಾಂಗ್ರೆಸ್ಸನ್ನು ಜೋಡಿಸುವ ಯಾತ್ರೆ ಎಂದು ಕಾಲೆಳೆದಿದ್ದಾರೆ.